ಬೇಸಿಗೆ ರಜೆ ವೇಳೆಯಲ್ಲಿ ಸರಕಾರಿ ಶಾಲೆಗಳಲ್ಲಿ ಬೇಸಿಗೆ ಶಿಬಿರದ ಹೆಸರಿನಲ್ಲಿ ಮಕ್ಕಳ ಪಾಲಕರ ಜೇಬಿಗೆ ಕತ್ತರಿ ಹಾಕುವ ಹುನ್ನಾರ ನಡಿದಿದೆ “ಬೇಸಿಗೆ ಶಿಬಿರಕ್ಕೆ ” ಸಂಬಂದಿಸಿದ ಹಾಗೆ ಆಯಾ ಕ್ಷೇತ್ರದ ಬಿ. ಇ. ಓ ಅವರಿಂದ ಪರವಾನಿಗೆ ಪಡೆದು ಶಿಬಿರ ನಡೆಸಲು ಅವಕಾಶ ಇದೆ ಆದರೆ ಅದು ಸಂಪೂರ್ಣವಾಗಿ ಉಚಿತವಾಗಿರಬೇಕು ಮಕ್ಕಳಿಂದ ಯಾವದೇ ರೀತಿಯಾದ ಶುಲ್ಕ ವಸೂಲಿ ಮಾಡುವಂತಿಲ್ಲ ಆದ್ರೆ ಈ ಶಾಲೆಯಲ್ಲಿ ಮಕ್ಕಳಿಂದ ಹಣ ವಸೂಲಿ ಮಾಡುತ್ತಿದ್ದಾರೆ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೊಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಟೆಪ್ಪವನರ ತೋಟದ ಶಾಲೆಯಲ್ಲಿ ಈ ವಸೂಲಿ ದಂದೆ ಶುರುವಾಗಿದೆ, ಮಕ್ಕಳಿಂದ 300ರಿಂದ 800 ರೂಪಾಯಿಗಳ ಪೀ ನೆಪದಲ್ಲಿ ಪಿಕುವದು ಬೆಳಕಿಗೆ ಬಂದಿದೆ.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಶಾಲಾ ಮುಖ್ಯಶಿಕ್ಷಕ ಮಾರುತಿ ಕಳ್ಳಿಗುದ್ದಿ ಹಾಗೂ ಎಸ್ ಡಿ ಎಂ ಸಿ ಹಾಗೂ CRC ಬೀರಪ್ಪ ಬಾಗೇನ್ನವರ ಹಾಗೂ BEO ಆರ್ ಬಸವರಾಜಪ್ಪ ಅವರ ಕೃಪಾಕಟಾಕ್ಷೆ ಈ ದಂದೆಗೆ ಇರಬಹುದೇ ಅನ್ನೋ ಅನುಮಾನ ವ್ಯಕ್ತವಾಗಿದೆ.
ಏನೇ ಆಗಲಿ ಸಾವಿರಾರು ರೂಪಾಯಿ ಸಂಬಳ ಪಡೆದು ಇಂತಹ ಗಿಂಬಳಕ್ಕೂ ಆಸೆ ಮಾಡಿ ಬಡ ಮಕ್ಕಳ ಪಾಲಕರ ಜೇಬಿಗೆ ಕತ್ತರಿ ಹಾಕುವ ಖದಿಮರ ವಿರುದ್ಧ ಮೇಲಧಿಕಾರಿಗಳು ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕಿದೆ
ವರದಿ: ಎಂ. ಕೆ. ಸಪ್ತಸಾಗರ
AIN ಚಿಕ್ಕೋಡಿ