ಚಿಕ್ಕೋಡಿ : ಯುಪಿಎಸ್ಸಿ ಎಕ್ಸಾಮ ಬರೆಬೇಕು ಒಂದು ಉನ್ನತ ಮಟ್ಟದ ಹುದ್ದೆಗೆ ಏರಬೇಕು ಎಂದು ಬಹಳ ಜನರ ಕನಸಾಗಿರುತ್ತೆ. ಬಟ್ ಗುರಿ ಮುಟ್ಟುವರು ಮಾತ್ರ ಬಹಳ ಕಡಿಮೆ ಮಂದಿ. ಯಾಕಂದ್ರೆ ಆ ಹಾದಿ ಅಷ್ಟು ಕಠಿಣ ಇರುತ್ತೆ. ಅದಕ್ಕಾಗಿ ತುಂಬಾ ಶ್ರಮ ಹಾಕುವ ದೃಢ ಮನಸ್ಥಿತಿ ಇರಬೇಕು. ಅದನ್ನು ಪಡೆದೆ ತಿರುತ್ತೇನೆ ಎಂಬ ಛಲ ಸತತ ಪ್ರಯತ್ನ ತುಂಬಾ ಮುಖ್ಯ ಆಗಿರುತ್ತೆ.
ಕೊಪ್ಪಳದಲ್ಲಿ ಇಬ್ಬರು ಪಾಕ್ ಮಹಿಳೆಯರು ಪತ್ತೆ: ಉನ್ನತ ಮೂಲಗಳಿಂದ ಮಾಹಿತಿ ಲಭ್ಯ!
ಹೌದು… ಇತ್ತೀಚಿಗೆ ಅಷ್ಟೇ ಯುಪಿಎಸ್ಸಿ ರಿಸಲ್ಟ್ ಪ್ರಕಟಕೊಂಡಿದ್ದು ಸಾಮಾನ್ಯ ಕುರಿ ಕಾಯುವ ಯುವಕನೊಬ್ಬ ಯುಪಿಎಸ್ಸಿ ಪಾಸ್ ಮಾಡಿದ್ದಾನೆ. ಈತ ಕುರಿಮೆಯಿಸುವಾಗಲೇ ಫಲಿತಾಂಶ ಪ್ರಕಟಗೊಂಡಿದ್ದು ದೇಶದಲ್ಲಿ 551 ರ್ಯಾಂಕ್ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾನೆ. ಈ ಕುರಿಗಾಹಿ ಸಾಧಕನ ಯಶೋಗಾಥೆ ಇಲ್ಲಿದೆ ನೋಡಿ…
ಕುರಿ ಮೇಯಿಸುತ್ತಾ ಬೆಳಗಾವಿಯ ನಾನಾವಾಡಿಯಲ್ಲಿ ವಾಸವಿರುವ ಈ ಯುವಕನ ಹೆಸರು ಬೀರಪ್ಪ ಸಿದ್ದಪ್ಪ ಡೋಣಿ ಈತ ಮೂಲತ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಎಮಗೆ ಗ್ರಾಮದವನು. ಸದ್ಯ ಬೀರಪ್ಪ ದೇಶವೇ ತಿರುಗಿ ನೋಡುವ ಸಾಧನೆಯನ್ನ ಮಾಡಿದ್ದಾನೆ. ದೇಶದ ಅತ್ಯುನತ್ತ ಪರೀಕ್ಷೆಯಲ್ಲಿ ಯುಪಿಎಸ್ಸಿಯಲ್ಲಿ ಬೀರಪ್ಪ ದೇಶಕ್ಕೆ 551 ನೇ ರ್ಯಾಂಕ್ ಪಡೆದು ತಾನು ಕಲಿತ ಶಾಲೆ ಹಾಗೂ ತನ್ನೂರು ಹಾಗೂ ತನ್ನ ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ. ಸದ್ಯ ಕುರಿ ಹಿಂಡಿನಲ್ಲಿಯೇ ಇರುವ ಈತ ಮುಂದೆ ದೇಶದಲ್ಲಿ ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಆಸೆ ಹೊಂದಿದ್ದಾನೆ.
ಮಹಾರಾಷ್ಟ್ರದ ಕಾಗಲ್ ತಾಲುಕಿನ ಎಮಗೆ ಗ್ರಾಮದ ಸಿದ್ದಪ್ಪ ಹಾಗೂ ಬಾಳವ್ವ ದಂಪತಿಯ ಮೂರನೇ ಮಗನಾಗಿ ಜನಿಸಿದ ಬೀರಪ್ಪ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ತನ್ನೂರು ಎಮಗೆಯಲ್ಲಿ ಮುಗಿಸಿ ನಂತರ ಪಿಯು ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿ ನಂತರ ಬಿಟೆಕ್ ಪದವಿ ಪಡೆದಿದ್ದಾನೆ. ಈತನ ಇಡೀ ಕುಟುಂಬದ ವೃತ್ತಿಯೇ ಕುರಿಗಾಹಿತನ, ಆದ್ರೆ ಈತನಿಗೆ ಜೀವನದಲ್ಲಿ ಎನಾದ್ರೂ ಸಾಧಿಸಬೇಕು ಅನ್ನೋ ಆಸೆ ಇತ್ತು. ಬಿಎಸ್ಸಿ ಪದವಿ ಪಡೆದಿದ್ದ ಬೀರಪ್ಪ ಈತನ ಪ್ರತಿಭೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಸಿಕ್ಕಿತ್ತು. ಆದರೆ ಅದಕ್ಕೆ ತೃಪ್ತಿ ಹೊಂದದ ಬೀರಪ್ಪ ಅದಕ್ಕೆ ರಾಜೀನಾಮೆ ನೀಡಿ 2021 ರಿಂದ ಓದಲು ಪ್ರಾರಂಭ ಮಾಡಿದ್ದ. ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಆಗಲೇಬೇಕು ಎಂದು ಹಠ ಹಿಡಿದು ಛಲದಂಕಮಲ್ಲನ ರೀತಿ ತಯಾರಿ ನಡೆಸಿ ಕಡೆಗೆ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ದೇಶಕ್ಕೆ 551 ನೇ ರ್ಯಾಂಕ್ ಪಡೆಯುವುದರ ಮೂಲಕ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ.
ಈತನಗೆ ಸಾಧನೆಗೆ ಬಡತನ, ವೃತ್ತಿ, ಅಡ್ಡಿ ಬರಲಿಲ್ಲ, ಬಡತನ ಇದ್ರು ಅವರಿವರ ಸಹಾಯದಿಂದ ಸಾಧನೆ ಮಾಡಿದ್ದೇನೆ ಎನ್ನುತ್ತಾರೆ ಬೀರಪ್ಪ. ಬೀರಪ್ಪನ ತಂದೆ ಅಷ್ಟೊಂದು ಶಾಲೆ ಕಲಿತಿಲ್ಲ, ಇನ್ನು ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿದ ಅಕ್ಕನನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮಕ್ಕೆ ಕೊಟ್ಟಿದ್ದಾರೆ. ಅಣ್ಣ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇ ಮಗನಾದ ಬೀರಪ್ಪ ಯುಪಿಎಸ್ಸಿಯಲ್ಲಿ ಮೂರನೇ ಪ್ರಯತ್ನಕ್ಕೆ ತೇರ್ಗಡೆ ಹೊಂದಿದ್ದಾನೆ. ಮೊದಲ ಪ್ರಯತ್ನದಲ್ಲಿ ಮೂವತ್ತು ಹಾಗೂ ಎರಡನೇ ಪ್ರಯತ್ನದಲ್ಲಿ ಕೇವಲ ಮೂರು ಅಂಕದಲ್ಲಿ ಹಿಂದೆ ಬಿದ್ದಿದ್ದ. ಆದರೆ ಛಲವನ್ನು ಬಿಡದೆ ಎಡಬಿಡದೆ ಓದಿ ಸದ್ಯ ಪ್ರಿಲಿಮಿನರಿ ಹಾಗೂ ಮೇನ್ಸ್ ಎಕ್ಸಾಂ ಪಾಸ್ ಆಗಿ ಇಂಟರ್ವ್ಯೂ ನಲ್ಲೂ ಪಾಸಾಗಿದ್ದಾನೆ. ಇನ್ನು ಬೀರಪ್ಪನ ಈ ಸಾಧನೆ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು ಬಂಧು ಮಿತ್ರರು ಪುಲ್ ಖುಷಿಯಾಗಿ ಹಾರ ಶಾಲು ಹಾಕಿ ಸನ್ಮಾನ ಮಾಡುತ್ತಿದ್ದಾರೆ.
ಇನ್ನು ಚಿಕ್ಕೋಡಿ ತಾಲುಕಿನ ಜೋಡಕುಳಿ ಗ್ರಾಮದ ಅಕ್ಕನಿಗೆ ವಿಷಯ ತಿಳಿಸಲು ಓಡೋಡಿ ಬಂದ ಬೀರಪ್ಪ ಸಾಧನೆಗೆ ಅಕ್ಕ ತುಂಬಾ ಖುಷಿ ಪಟ್ಟಿದ್ದಾಳೆ. ಬಡತನದಲ್ಲಿ ನನ್ನ ತಮ್ಮಂದಿರು ಸಾಧನೆ ಮಾಡಿದ್ದಾರೆ. ಮೊದಲನೆ ತಮ್ಮ ಕಷ್ಟಪಟ್ಟು ಕೂಲಿನಾಲಿ ಓದಿ ಮಿಲಿಟರಿ ಸೇರಿದ್ದಾನೆ. ಈತ ಕಷ್ಟಪಟ್ಟು ಯುಪಿಎಸ್ಸಿ ಉತ್ತೀರ್ಣ ಆಗಿದ್ದಾನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಅಕ್ಕನ ಮನೆಯಲ್ಲೂ ಕೂಡ ಬೀರಪ್ಪನ ಸಾಧನೆ ಸಾಕಷ್ಟು ಜನ ಬಂಧು ಬಳಗದವರು ಭೇಟಿ ನೀಡಿ ಸನ್ಮಾನ ಮಾಡುತ್ತಿದ್ದಾರೆ. ಕುರಿಗಾಹಿ ಯುವಕನೋರ್ವ ತನ್ನ ನಿರಂತರ ಶ್ರಮದಿಂದ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಸಂಬಂಧಿಕರು, ಇತರೆ ಕುರಿಗಾಯಿಗಳು ಸಂತಸ ವ್ಯಕ್ತಪಡಿಸಿದ್ದು, ಬೀರಪ್ಪನ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಅಲ್ಲದೇ ಸನ್ಮಾನ ಮಾಡಿ ಆತನಿಗೆ ಕುರಿ ಗಿಫ್ಟ್ ನೀಡಿ ಶುಭ ಹಾರೈಸಿದ್ದಾರೆ
ಯಾರೇ ಆಗಲಿ ನಿರಂತರ ಶ್ರಮ ಹಾಕಿದರೆ ಎಂತಹ ಕೆಲಸವನ್ನಾದರೂ ಮಾಡಿ ಮುಗಿಸಬಹುದು ಬೀರಪ್ಪ ಎಲ್ಲರಿಗೂ ತೋರಿಸಿದ್ದಾನೆ. ಒಟ್ಟಿನಲ್ಲಿ ಕುರಿಗಾಹಿ ಯುವಕನೋರ್ವ ತನ್ನ ನಿರಂತರ ಶ್ರಮದಿಂದ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಪಾಸಾಗಿದ್ದು ತನ್ನ ಹೆತ್ತವರಿಗೂ ಹಾಗೂ ತನ್ನ ಊರಿಗೂ ಕೀರ್ತಿ ತಂದಿದ್ದಾನೆ.