ಬೆಂಗಳೂರು: ಬರೋಬ್ಬರಿ 18 ವರ್ಷಗಳ ಐಪಿಎಲ್ ಕಾಯುವಿಕೆ ಅಂತ್ಯವಾಗಿತ್ತು. ರಜತ್ ಪಟಿದಾರ್ ನೇತೃತ್ವದ ಆರ್ಸಿಬಿ ಐಪಿಎಲ್ ಕಪ್ ಎತ್ತಿ ಹಿಡಿಯುತ್ತಿದ್ದಂತೆಯೇ ಇಡೀ ಕರುನಾಡು ಸಂಭ್ರಮಿಸಿತ್ತು. ಆದರೆ ಆ ಸಂಭ್ರಮ ಒಂದೇ ದಿನದಲ್ಲಿ ಅಂತ್ಯವಾಗಿದೆ. ಸಂಭ್ರಮಾಚರಣೆ ವೇಳೆ ಆಗಿರುವ ಕಾಲ್ತುಳಿದ ದುರಂತ 11 ಅಭಿಮಾನಿಗಳ ಬಲಿ ಪಡೆದಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಘಟನೆ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದ್ದು, ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಕಾಲ್ತುಳಿತದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾವು: ಉದ್ಯಮಿ ವಿಜಯ್ ಮಲ್ಯ ಹೇಳಿದ್ದೇನು?
ಎಜಿ ಶಶಿಕಿರಣ್ ಶೆಟ್ಟಿ ಪೀಠಕ್ಕೆ ವಿವರಣೆ ನೀಡಲಿದ್ದಾರೆ. ವಕೀಲ ಹೇಮಂತ್ ರಾಜ್, ಜಿ.ಆರ್.ಮೋಹನ್ ಕೂಡ ಮಾಹಿತಿ ನೀಡಲಿದ್ದಾರೆ. ಹೈಕೋರ್ಟ್ ಕಟ್ಟಡದ ಮೇಲೂ ಜನರು ನಿಂತಿದ್ದರು. ಭದ್ರತಾ ಲೋಪವಾಗಿದೆ ಎಂದು ವಕೀಲರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಜನರ ಸಾವುನೋವಿನ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಭದ್ರತಾ ಲೋಪದ ಬಗ್ಗೆ ಸರ್ಕಾರದ ವರದಿ ಕೇಳಿದ್ದೇವೆ. ವಿಚಾರಣೆ 2:30ಕ್ಕೆ ನಿಗದಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.