ಚಿತ್ರದುರ್ಗ: ಕುರಿಗಳ ಮೈ ತೊಳೆಯಲು ಹಳ್ಳಕ್ಕೆ ಹೋಗಿದ್ದ ದಂಪತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೊಸದುರ್ಗ ತಾಲೂಕಿನ ಅತ್ತಿಮಗೆ ಗ್ರಾಮದಲ್ಲಿ ನಡೆದಿದೆ.
ಅತ್ತಿಮಗೆ ಗ್ರಾಮದ ಕುತರಿಗಾಯಿ ತಿಮ್ಮೇಶ, ಪತ್ನಿ ಪುಟ್ಟಮ್ಮ ಮೃತ ದಂಪತಿಗಳಾಗಿದ್ದಾರೆ. ಕುರಿಗಳ ಮೈ ತೊಳೆಯಲು ಗ್ರಾಮದ ಹೊರವಲಯದ ಕಾನಿ ಹಳ್ಳಕ್ಕೆ ದಂಪತಿ ಕುರಿಗಳನ್ನು ಹೊಡೆದುಕೊಂಡು ಹೋಗಿದ್ರು. ಈ ವೇಳೆ ಆಕಸ್ಮಿಕವಾಗಿ ಕಳ್ಳದ ಆಳವಾದ ನೀರಿಗೆ ಜಾರಿ ದಂಪತಿ ಸಾವನ್ನಪ್ಪಿದ್ದಾರೆ. ಮೃತತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.