Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯ!

    By AIN AuthorNovember 16, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪೂರ್ವ, ಪಶ್ಚಿಮ, ಯಲಹಂಕ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿಯ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇಂದು ನಡೆಸಲಾಯಿತು.

    ಪೂರ್ವ ವಲಯ:

    ಪೂರ್ವ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಓ.ಎಫ್.ಸಿ. ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು 6 ವಿಧಾನ ಸಭಾ ಕ್ಷೇತ್ರಗಳಾದ ಶಾಂತಿನಗರ, ಶಿವಾಜಿನಗರ, ಸಿ.ವಿ.ರಾಮನ್‌ನಗರ, ಪುಲಿಕೇಶಿನಗರ, ಸರ್ವಜ್ಞನಗರ ಮತ್ತು ಹೆಬ್ಬಾಳ ವ್ಯಾಪ್ತಿಯಲ್ಲಿ ನಡೆಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆಗಳ ಮೇಲ್ಚಾವಣಿ, ತಳ್ಳುವ ಗಾಡಿ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ. ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.

    ಅದರಂತೆ, ಪೂರ್ವ ವಲಯ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಒ.ಎಫ್.ಸಿ ಕೇಬಲ್ ತೆರವುಕಾರ್ಯಾಚರಣೆ ನಡೆಸಲಾಗಿದ್ದು, ಈ ಪೈಕಿ 13 ಕಿ.ಮೀ ವ್ಯಾಪ್ತಿಯ ರಸ್ತೆಯಲ್ಲಿ 104 ತಳ್ಳುವ ಗಾಡಿ ಜಪ್ತಿ ಮಾಡಲಾಗಿದೆ. 54 ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡ ಅಂಗಡಿ ಮುಂಗಟ್ಟುಗಳ ಮೇಲ್ಚಾವಣಿ, 19 ಅನಧಿಕೃತ ನಾಮಫಲಕಗಳು, 7000 ಮೀಟರ್ ಅನಧಿಕೃತ ಒ.ಎಫ್.ಸಿ ಕೇಬಲ್‌ಗಳು ಹಾಗೂ 5 ಅನಧಿಕೃತ ಪೆಟ್ಟೆಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

    ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೇ ತೊಂದರೆಯಾಗದಿರಲು ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆ, ತಳ್ಳುವ ಗಾಡಿ ಹಾಗೂ ಅನಧಿಕೃತ ಓ.ಎಫ್.ಸಿ ಕೇಬಲ್ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಾ ಜೊತೆಗೆ ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆಗೆ ಸಂಚಾರ ಪೊಲೀಸ್ ವಿಭಾಗ ಹಾಗೂ ಸಾರ್ವಜನಿಕರು ಸಹಕರಿಸುವಂತೆ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಕೆ.ಆರ್.ಪಲ್ಲವಿರವರು ಕೋರಿರುತ್ತಾರೆ.

    ಪಶ್ಚಿಮ ವಲಯ:

    ಪಶ್ಚಿಮ ವಲಯದ ಮಹಾಲಕ್ಷ್ಮೀಪುರಂ ವಿಭಾಗ ನಾಗಪುರ ವಾರ್ಡ್ ನಲ್ಲಿ ಅನಧಿಕೃತವಾಗಿರುವ ಓ.ಎಫ್.ಸಿ.ಕೇಬಲ್‌ಗಳು ಹಾಗೂ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಡೆಸುತ್ತಿರುವ ಅಂಗಡಿಗಳನ್ನು ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಜೊತೆಗೆ ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

    ನಾಗಪುರ ವಾರ್ಡ್ 1ನೇ ಬ್ಲಾಕ್ ರಾಜಾಜಿನಗರ, 10ನೇ ಅಡ್ಡರಸ್ತೆ ಹಾಗೂ 19ನೇ ಮುಖ್ಯರಸ್ತೆ ಸೇರಿ 1.20 ಕಿ.ಮೀ ಅನಧಿಕೃತ ಓ.ಎಫ್.ಸಿ ಕೇಬಲ್‌ಗಳು ಹಾಗೂ ಅನಧಿಕೃತವಾಗಿ ಫುಟ್ ಪಾತ್ ಮೇಲೆ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಹಾಗೂ ರಸ್ತೆ ಬದಿಯಲ್ಲಿ ಶೇಖರಣೆಯಾಗಿರುವ ಕಲ್ಲು, ಮಣ್ಣು, ಜಾಹೀರಾತು ಫಲಕಗಳು ಹಾಗೂ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಲಾಗಿರುತ್ತದೆ.

    ಅನಧಿಕೃತ ಓ.ಎಫ್.ಸಿ. ಕೇಬಲ್‌ಗಳ ತೆರವು ಕಾರ್ಯಾಚರಣೆಯಲ್ಲಿ ವಿದ್ಯುತ್ ವಾಹನದ ಲ್ಯಾಡರ್ ಹಾಗೂ ಅನಧಿಕೃತವಾಗಿ ಪಾದಚಾರಿ ಮಾರ್ಗದ ಮೇಲೆ ನಡೆಸುತ್ತಿರುವ ಅಂಗಡಿಗಳನ್ನು ರಸ್ತೆಯ ಎರಡು ಬದಿಗಳಲ್ಲಿ ಸುಮಾರು 1.20 ಕಿ.ಮೀ ಉದ್ದದ ರಸ್ತೆಯಲ್ಲಿನ ಅಡ್ಡಲಾಗಿರುವ ಎಲ್ಲಾ ಅಡಚಣೆಗಳನ್ನು ತೆರವುಗೊಳಿಸಿ ಸಾರ್ವಜನಿಕರು ಓಡಾಡಲು ಅನುವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಓ.ಎಫ್.ಸಿ.ಕೇಬಲ್‌ಗಳನ್ನು ಮತ್ತು ಅನಧಿಕೃತ ಅಂಗಡಿಗಳನ್ನು ನಡೆಸಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಸ್ಥೆ ಅಥವಾ ಸಂಬಂಧಪಟ್ಟವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.

    ಪಶ್ಚಿಮ ವಲಯ ಚಾಮರಾಜಪೇಟೆ ವಾರ್ಡ್ ನ 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಿಂದ 9ನೇ ಅಡ್ಡರಸ್ತೆಯವರೆಗೆ ಒಟ್ಟು 0.80 ಕಿ.ಮೀ. ಅನಧೀಕೃತವಾಗಿ ಪಾದಚಾರಿ ಮಾರ್ಗ ದಲ್ಲಿ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

    ಯಲಹಂಕ ವಲಯ:

    ಯಲಹಂಕ ವಲಯ ವ್ಯಾಪ್ತಿಯಲ್ಲಿಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ರೈತರ ಸಂತೆ, ಸಹಕಾರನಗರ ಮುಖ್ಯ ರಸ್ತೆ, ಕೊಡಿಗೇಹಳ್ಳಿ ಮುಖ್ಯ ರಸ್ತೆ, ಅಟ್ಟೂರು ಲೇಔಟ್ ಮುಖ್ಯ ರಸ್ತೆ, ಬಿ.ಇ.ಎಲ್ ಲೇಔಟ್ ವಿದ್ಯಾರಣ್ಯಪುರ ಹಾಗೂ ಎನ್.ಟಿ.ಐ ಲೇಔಟ್ ನಲ್ಲಿ ನಡೆಸಲಾದೆ.

    ದಕ್ಷಿಣ ವಲಯ:

    ದಕ್ಷಿಣ ವಲಯ ಪದ್ಮನಾಭನಗರ ವ್ಯಾಪ್ತಿಯ ಬನಶಂಕರಿ ಉಪವಿಭಾಗದ ಗಣೇಶ ಮಂದಿರ, ಬಿ.ಡಿ.ಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ 24ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, 17ನೇ ಮುಖ್ಯರಸ್ತೆ, 22ನೇ ಅಡ್ಡರಸ್ತೆ ಮತ್ತು 23ನೇ ಅಡ್ಡರಸ್ತೆಯಲ್ಲಿದ್ದ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗುವಂತೆ ನಡೆಸುತ್ತಿದ್ದ ವ್ಯಾಪಾರ ವಹಿವಾಟುಗಳನ್ನು ಇಂದು ತೆರವುಗೊಳಿಸಲಾಯಿತು.

    ಈ ಕಾರ್ಯಾಚರಣೆಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟಾಗಿದ್ದ 8 ತಳ್ಳುವ ಗಾಡಿ, 2 ಕೇಬಲ್, 10 ಆಟೋ ಕ್ರೇಟ್, 1 ಜಾಹಿರಾತು ಫಲಕಗಳು, 2 ಶೆಡ್‌ಗಳು ಹಾಗೂ 2 ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಯಿತು.

    Post Views: 3

    Demo
    Share. Facebook Twitter LinkedIn Email WhatsApp

    Related Posts

    ಕರುನಾಡಿಗೆ ಕೋವಿಡ್ ಭೀತಿ: ಬೆಂಗಳೂರಿನಲ್ಲಿ 32 ಕೇಸ್ ದಾಖಲು!

    May 23, 2025

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ದುಡ್ಡು ವಿಚಾರ: BMRCL ಕೊಟ್ಟ ಸ್ಪಷ್ಟನೆ ಇಲ್ಲಿದೆ!

    May 23, 2025

    ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ವಿಡಿಯೋ ತೆಗೆದು ಅಪ್ಲೋಡ್ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್!

    May 23, 2025

    ಪ್ರಹ್ಲಾದ್ ಜೋಶಿಯವರಿಗೆ ಧೈರ್ಯ ಇಲ್ವಾ!? ಎಂಬಿ ಪಾಟೀಲ್ ಹಿಂಗೇಳಿದ್ಯಾಕೆ?

    May 23, 2025

    ನ್ಯಾಷನಲ್ ಹೆರಾಲ್ಡ್ ED ಚಾರ್ಜ್‌ಶೀಟ್:‌ ಎಲ್ಲಾ ತನಿಖೆಗೂ ಸಿದ್ಧ ಎಂದ ಡಿಕೆಶಿ

    May 23, 2025

    ನಿಮ್ಮ ಹೊಸ ನಾಮಕರಣದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ: ನಿಖಿಲ್ ಕುಮಾರಸ್ವಾಮಿ ಅಸಮಾಧಾನ

    May 23, 2025

    ಸಿನಿಮಾದವರಿಗೆ ನಟ್ಟು-ಬೋಲ್ಟು ಟೈಟ್‌ ಮಾಡ್ತೀನಿ ಎಂದಿದ್ದ ಡಿಕೆಶಿ ಸಂಗೀತ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದೇನು?

    May 23, 2025

    ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿ: ಸರ್ಕಾರ ಆದೇಶ

    May 23, 2025

    ಸಹನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ʼಕಿಲಾಡಿʼ ಮನು ಐದು ದಿನ ಖಾಕಿ ಕಸ್ಟಡಿಗೆ!

    May 23, 2025

    LPG Cylinder: ಉಚಿತ ಗ್ಯಾಸ್ ಸಿಲಿಂಡರ್ ಬೇಕಾ..? ಹಾಗಿದ್ರೆ ಈ ಯೋಜನೆ ಮೂಲಕ ಅಪ್ಲೈ ಮಾಡಿ ಬೇಗ!

    May 23, 2025

    ತಮನ್ನಾಗೆ ಮೈಸೂರು ಸ್ಯಾಂಡಲ್‌ ರೆಡ್ ಕಾರ್ಪೆಟ್ : KSDL ವಿರುದ್ಧ ಕನ್ನಡಿಗರ ಪ್ರೊಟೆಸ್ಟ್ :Video

    May 23, 2025

    ಗಂಡ ಕಂಬಿ ಹಿಂದೆ, ಹೆಂಡ್ತಿ ಥಿಯೇಟರ್‌ನಲ್ಲಿ: ಮಡೆನೂರು ಮನು ಪತ್ನಿ ಫಸ್ಟ್‌ ರಿಯಾಕ್ಷನ್?

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.