ಬಳ್ಳಾರಿ: ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆ ಚರ್ಚೆಯಾಗಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆ ಚರ್ಚೆಯಾಗಲ್ಲ. ಸಚಿವರು ಕೈಗೆ ಸಿಗಲ್ಲ ಎಂದು ಕೆಲವರ ಆರೋಪವಿದೆ.
ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..
ಇದಕ್ಕೆ ಸೂಚನೆ ಕೊಟ್ಟಿದ್ದಾರೆ. ನಾವು ಹೈಕಮಾಂಡ್ ಹೇಳಿದ ಹಾಗೆ ಕೆಲಸ ಮಾಡ್ತೇವೆ. ಯಾರದ್ದೂ ದೂರುಗಳಿಲ್ಲ. ಕೇವಲ ಬಿ.ಆರ್.ಪಾಟೀಲ್ ಅವರ ಸಮಸ್ಯೆ ಇತ್ತು. ಅವರನ್ನು ಕರೆದು ಮಾತನಾಡಿದ್ದಾರೆ. ತಪ್ಪು ಮಾಡಿದ್ರೆ ತಿದ್ದಲು ನಮ್ಮಲ್ಲಿ ಹಿರಿಯರಿದ್ದಾರೆ, ತಿದ್ದುವವರು ಇದ್ದಾರೆ. ವಿರೋಧ ಪಕ್ಷದವರು ಮಾತನಾಡೋ ಕೆಲಸ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಶಾಸಕರೇ ಹೆಚ್ಚು ಮಾತನಾಡ್ತಾರಲ್ಲ ಎನ್ನುವ ಪ್ರಶ್ನೆಗೆ, ಇಬ್ಬರು ಮೂವರು ಶಾಸಕರು ಮಾತನಾಡಿದ್ದಾರೆ, ಏನಾಗಲ್ಲ. ಮಾಧ್ಯಮದಲ್ಲಿ ಹೇಳುವಷ್ಟು ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.