ಗದಗ:- ಕರ್ನಾಟಕದಲ್ಲಿ ಚರ್ಚೆ ಆಗುತ್ತಿರುವ ಸಿಎಂ ಬದಲಾವಣೆ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ. ನೀವು ಮಾಧ್ಯಮದಲ್ಲಿ ಮನಸ್ಸಿಗೆ ಬಂದಂತೆ ವಿಶ್ಲೇಷಣೆ ಮಾಡಿದ್ರೆ ನನಗೆ ಸಂಬಂಧವಿಲ್ಲ. ಬಿಜೆಪಿ ಅವರಿಗೆ ಇನ್ನೂ ಮೂರು ವರ್ಷ ಇದೇ ಕೆಲಸ.
ಅದರ ಜೊತೆಗೆ ಮುಂದಿನ ೫ ವರ್ಷ ಪ್ಯಾಕೇಜ್ ಡೀಲ್ ಅಂತ ಹೇಳಿ. ಇಷ್ಟು ವರ್ಷ ಗ್ಯಾರಂಟಿ ಕೊಟ್ಟಿದಾರೆ. ಸುಳ್ಳು ಹೇಳ್ತಾರೆ, ಕೊಡಲ್ಲ ಅಂತೆಲ್ಲಾ ಬರೀ ಇದನ್ನೇ ಹೇಳಿದ್ರು. ಈಗ ಹೇಳ್ತಾರೆ ಗ್ಯಾರಂಟಿ ವಿರೋಧಿಗಳಲ್ಲ ಅಂತಿದ್ದಾರೆ. ಯಾಕೆಂದರೆ ಜನ್ರು ಅವರಿಗೆ ಕ್ಯಾಕರಿದಿ ಉಗಿತಿದಾರೆ. ಗ್ಯಾರಂಟಿ ಬಗ್ಗೆ ರಾಯರೆಡ್ಡಿ ಹೇಳಿಕೆಯನ್ನು ಮಧು ಬಂಗಾರಪ್ಪ ಸಮರ್ಥಿಸಿಕೊಂಡರು. ನೀವೆ ತಿಪ್ಪರಲಾಗ ಹೊಡಲಿ, ನಾನೇ ಹೊಡಿಲಿ, ಬಿಜೆಪಿ ನವರು ಹೊಡಿಲಿ ೫ ವರ್ಷ ಗ್ಯಾರಂಟಿಗಳು ಇರುತ್ತವೆ.
ಗ್ಯಾರಂಟಿ ಪ್ರನಾಳಿಕೆಯ ಉಪಾಧ್ಯಕ್ಷನಾಗಿ ನಾನಿದ್ದೆನೆ. ಅದಕ್ಕೆ ನನಗೆ ಹೆಮ್ಮೆ ಇದೆ. ಅಷ್ಟು ಸುಲಭವಾಗಿ ನಿಲ್ಲಿಸಲು ಸಿಎಂ ಬಿಡಲ್ಲ. ಬಾಯಿ ಮುಚ್ಚಿಕೊಂಡು ಖರ್ಗೆ ಅವರು ಇರ್ರಿ ಇಂದಿದ್ದಾರೆ. ಅದನ್ನು ಬಿಟ್ರೆ ಈ ವಿಚಾರದಲ್ಲಿ ನನಗೆ ಏನು ಗೊತ್ತಿಲ್ಲ. ೫ ವರ್ಷ ಗ್ಯಾರಂಟಿಗಳು ಇರುತ್ತವೆ ಅನ್ನೊದಾದ್ರೆ, ಸಿದ್ದರಾಮಯ್ಯ ಸಿಎಂ ಆಗಿ ೫ ವರ್ಷ ಇರ್ತಾರಾ ಎಂಬ ಪ್ರಾಶ್ನೆ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ಚರ್ಚೆ ಮಾಡುವ ಅಧಿಕಾರ ನನಗೆ ಇಲ್ಲ. ನೀವು ಪ್ರಶ್ನೆ ಕೇಳಲು ಅಧಿಕಾರ ಇದೆ. ನಾನು ಬಾಯಿ ಮುಚ್ಚಿಕೊಂಡು ಇರ್ತೆನಿ ಅಂತ ಬೆಳಿಗ್ಗೆಯಿಂದ ಹೇಳ್ತಾನೇ ಇದೆನಿ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆರ್.ಎಸ್.ಎಸ್ ನಿಷೇಧ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಯಾವ ನಿಟ್ಟಿನಲ್ಲಿ ಹೇಳಿದ್ದಾರೆ ಅವರನ್ನೆ ಕೇಳಿ, ಇದನ್ನೆಲ್ಲಾ ಚರ್ಚೆ ಮಾಡಬೇಕು. ಈ ದೇಶದಲ್ಲಿ ಸಂವಿಧಾನದ ವಿರುದ್ಧ ಯಾವನೇ ಹೋದ್ರು, ಅವರನ್ನು ಬ್ಯಾನ್ ಮಾಡುವುದು ಒಳ್ಳೆಯದು ಎಂದು ಮಧು ಬಂಗಾರಪ್ಪ ಹೇಳಿಕೆ ಕೊಟ್ಟಿದ್ದಾರೆ.