ಬೆಂಗಳೂರು:- ನವದೆಹಲಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಾಳೆ ದೆಹಲಿಗೆ ಭೇಟಿ ನೀಡಲಿದ್ದು, ಮಹತ್ವದ 2 ಕೇಸ್ ಬಗ್ಗೆ ರಿಪೋರ್ಟ್ ಸಲ್ಲಿಕೆ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾಳೆ ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ!
ಕರ್ನಾಟಕ ಭವನ ಉದ್ಘಾಟನೆ ನೆಪದಲ್ಲಿ ತೆರಳುತ್ತಿದ್ದು, ಉಳಿದೆಲ್ಲವೂ ರಾಜಕೀಯನಾ ಎಂಬ ಪ್ರಶ್ನೆ ಎದ್ದಿದೆ. ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಸರ್ಕಾರ, ಸಂಘಟನೆಯಲ್ಲಾದ ಬೆಳವಣಿಗೆಗಳ ಬಗ್ಗೆ ರಿಪೋರ್ಟ್ ನೀಡುವ ಸಾಧ್ಯತೆ ಇದೆ. ಹೈಕಮಾಂಡ್‌ಗೆ ಎರಡೂವರೆ ತಿಂಗಳ ರಿಪೋರ್ಟ್ ಕೊಡಲಿರುವ ಸಿದ್ದರಾಮಯ್ಯ, ಹೈಕಮಾಂಡ್ ಕೇಳಬಹುದಾದ ಎಲ್ಲದಕ್ಕೂ ಉತ್ತರ ಸಿದ್ಧ ಮಾಡಿದ್ದಾರೆ ಎಂಬುದು ಮೂಲಗಳ ಮಾಹಿತಿ ಆಗಿದೆ.
ಸರ್ಕಾರದ ಮುಂದಿನ ರೋಡ್ ಮ್ಯಾಪ್ ಕೂಡ ವರದಿಯಲ್ಲಿ ಇರುತ್ತೆ ಎನ್ನಲಾಗಿದೆ. ಪ್ರಮುಖವಾಗಿ ರನ್ಯಾರಾವ್ ಕೇಸ್, ಹನಿಟ್ರ್ಯಾಪ್ ಯತ್ನದ ವಿಚಾರಗಳಿಗೆ ಸಂಬಂಧಿಸಿದ ವರದಿ ನೀಡುವ ಸಾಧ್ಯತೆಯಿದೆ.