ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರ ವಿರುದ್ಧವೇ ಗರಂ ಆದ ಘಟನೆ ನಡೆಯಿತು. ಸಿಟ್ಟಾದ ಸಿಎಂ ಸಮವಸ್ತ್ರದಲ್ಲಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಸಿಎಂ ಕೈ ಎತ್ತಿದ್ದಾರೆ. ವೇದಿಕೆ ಮೇಲೆಯೇ ತಾಳ್ಮೆ ಕಳೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ವಿಡಿಯೋ, ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶವನ್ನು ಕಾಂಗ್ರೆಸ್ ಇಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿತ್ತು. ಈ ಸಮಾವೇಶದಲ್ಲಿ ಸಿಎಂ ಭಾಷಣ ಮಾಡುವಾಗ, ಬಿಜೆಪಿಯ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಮಾಡಿ ಅಡ್ಡಿಪಡಿಸಲಾಯಿತು. ಬಿಜೆಪಿ ಕಾರ್ಯಕರ್ತರು ವೇದಿಕೆ ಕೆಳಗೆ ಗಲಾಟೆ ಮಾಡುತ್ತಿದ್ದರು. ಅಲ್ಲ ಕಾರ್ಯಕರ್ತರು ಓಡಾಟ ಹೆಚ್ಚಿತ್ತು. ಈ ವೇಳೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಪೊಲೀಸರ ಮೇಲೆ ಗರಂ ಆಗಿದ್ದಾರೆ.
ಹೇ ಪೊಲೀಸ್ ಬಾರಯ್ಯ ಇಲ್ಲಿ ಯಾವನು ಅವನು ಬಾರಯ್ಯ ಇಲ್ಲಿ. ಯಾವನು ಅವನು ಎಸ್‌ಪಿ. ಏನು ಮಾಡ್ತಾ ಇದ್ದೀರಾ ಇಲ್ಲಿ ಎಂದು ಪ್ರಶ್ನೆ ಮಾಡಿದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೇದಿಕೆ ಮೇಲೆ ಬಂದು ಸಿಎಂ ಬಳಿ ಆಗಮಿಸಿದಾಗ ಗದರಿದ ಸಿಎಂ ಅವರ ಮೇಲೆ ಕೈ ಎತ್ತಲು ಮುಂದಾದರು. ಅಷ್ಟರದಲ್ಲಿ ವೇದಿಕೆ ಮೇಲೆ ಇದ್ದ ಸಚಿವ ಎಂ ಬಿ ಪಾಟೀಲ್, ಎಚ್‌ಕೆ ಪಾಟೀಲ್ ಅವರು ಸಿಎಂ ಬಳಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.