ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ ಪೊಲಿಟಿಷಿಯನ್ ಅಲ್ಲ ಕರೆಪ್ಟ್ ಪೊಲಿಟಿಷಿಯನ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದರು.
ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕ್ಲೀನ್ ಪೊಲಿಟೀಶಿಯನ್ ಅಲ್ಲ ಕರೆಪ್ಟ್ ಪೊಲಿಟೀಶಿಯನ್ ಅಂತಾ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಜಾತಿ ಜನಗಣತಿ ಬಗ್ಗೆ ತೀರ್ಮಾನ ಮಾಡಿ ಬಿಡ್ತಾರೆ ಅಂತಾ ವಿಶೇಷ ಕ್ಯಾಬಿನೆಟ್ ಕರೆದರೂ ಅಲ್ಲೂ ತೀರ್ಮಾನ ಆಗಿಲ್ಲ. ಸಿದ್ದರಾಮಯ್ಯ ಜಾತಿ ಜನಗಣತಿ ಹಿಡಿದುಕೊಂಡು ಆಡಳಿತ ಪಕ್ಷದಲ್ಲಿ ಇರೋ ಸಿಎಂ ಆಕಾಂಕ್ಷಿ ಇದ್ದಾರೆ ಅವರಿಗೆ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೂ ಕೂಡಾ ಬೆದರಿಸೋ ತಂತ್ರ ಮಾಡ್ತಿದ್ದಾರೆ. ಈ ತಂತ್ರದ ಹಿಂದೆ ಕುತಂತ್ರ ಇದೆ ಎಂದರು.
ಹಿರಿಯ ವಕೀಲ ಸದಾ ಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ತೋಳಿಗೆ ಕೆಂಪು ಪಟ್ಟಿ ಧರಿಸಿ ಪ್ರೊಟೆಸ್ಟ್!
ಇನ್ನೂ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಪರೀಕ್ಷಾರ್ಥಿಗಳ ಜನಿವಾರ ತೆಗೆದಿರೋದು ಮಕ್ಕಳ ಮೇಲಲ್ಲ, ಹಿಂದೂ ಸಮಾಜದ ಮೇಲೆ ಬಲಾತ್ಕಾರ ಮಾಡ್ತಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡೋದು ಅಂದ್ರೆ ಸಿದ್ದರಾಮಯ್ಯನವರಿಗೆ ಪರಮಾನಂದ. ಹಿಂದೂಗಳಿಗೆ ಅಪಮಾನ ಮಾಡೋದು ಬಹಳ ಸಂತೋಷ ಆಗುತ್ತೆ. ಅಲ್ಪಸಂಖ್ಯಾತರ ಓಲೈಕೆ ನಿರಂತರ ಮಾಡಿಕೊಂಡು ಬರ್ತಾ ಇದ್ದಾರೆ ಎಂದರು.