ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರು ಜೂ.10 ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜೂನ್ 10ರ ಒಳಗೆ ಒಳಮೀಸಲಾತಿ ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡಬೇಕು ಎಂದರು.
ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿ ಕೊಡದೇ ಕುಂಟು ನೆಪ ಹೇಳುತ್ತಿದ್ದಾರೆ. ಈಗ ನಾಗಮೋಹನ್ ದಾಸ್ ಅವರಿಂದ ಗಣತಿ ಮಾಡಿಸೋದಾಗಿ ಹೇಳುತ್ತಿದೆ. ಸರ್ಕಾರದ ಬಳಿಕ ಕಾಂತರಾಜು ವರದಿ ಅಂಕಿಅಂಶಗಳು ಇವೆ. ಅದರ ಆಧಾರದಲ್ಲಿ ಒಳಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು
ಇಲ್ಲದೆ ಹೋದರೆ ನಾಗಮೋಹನ್ ದಾಸ್ ಆಯೋಗ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡುತ್ತಿದೆ. ಇದಕ್ಕೂ ಮೊದಲೇ ಸಿದ್ದರಾಮಯ್ಯ ಜೂನ್10ರ ಒಳಗೆ ಮೀಸಲಾತಿ ಕೊಡುತ್ತೇವೆ ಎಂಬ ಭರವಸೆ ಕೊಟ್ಟು ಗಣತಿ ಶುರು ಮಾಡಿಸಬೇಕು ಎಂದರು.