ಬೆಂಗಳೂರು:- ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು ಈ ಹಿಂದೆ ಕಲಬುರಗಿಯಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆದಿದ್ದು ಇಂದು ಚಾಮರಾಜನಗರದಲ್ಲಿ ನಡೆಸಿದ್ದೇವೆ. ಬೆಳಗಾವಿ ವಿಭಾಗದಲ್ಲಿ ವಿಜಯಪುರ, ಬೆಂಗಳೂರು ವಿಭಾಗದ ಸಂಪುಟ ಸಭೆಯನ್ನು ನಂದಿಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.
Rain Alert: ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ!
ಬಿಜೆಪಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸುಳ್ಳು ಆರೋಪ ಮಾಡ್ತಾ ಇದಾರೆ. ಸರ್ಕಾರವು ಎಲ್ಲಾ ಹಣನೂ ಗ್ಯಾರಂಟಿಗೆ ಹಾಕಿ ಅಭಿವೃದ್ದಿಗೆ ಕೆಲಸಗಳಿಗೆ ದುಡ್ಡೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಾ, ಸರ್ಕಾರದ ವಿರುದ್ಧ ದ್ವೇಷದ ಕಾರಣಕ್ಕೆ ಈ ಸುಳ್ಳು ಹೇಳಲಿದ್ದು ಸರ್ಕಾರದ ಬಳಿ ಹಣ ಇಲ್ಲದಿದ್ದರೇ 3600 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ಕೊಡಲು ಆಗುತ್ತಿತ್ತಾ ಎಂದು ಕಿಡಿಕಾರಿದರು.
ನಾವೂ ಹೇಳಿದ್ದನ್ನೆ ಮಾಡೋದು ಬಿಜೆಪಿಗರಂತೆ ಜನರಿಗೆ ಸುಳ್ಳು ಹೇಳಿಕೊಂಡು ತಿರುಗೊಲ್ಲ ಎಂದು ಕುಟುಕಿದರು.