Close Menu
Ain Live News
    Facebook X (Twitter) Instagram YouTube
    Saturday, June 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ!? ಡೋಂಟ್ ವರಿ, ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

    By AIN AuthorJune 7, 2025
    Share
    Facebook Twitter LinkedIn Pinterest Email
    Demo

    ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳು ವಿವಿಧೆಡೆ ಓಡಾಡುವುದು ಕಂಡು ಬರುತ್ತದೆ. ಈ ಸಮಸ್ಯೆಯಂತೂ ಅಡುಗೆಮನೆಯಲ್ಲಿ ಹೆಚ್ಚು ಗೋಚರಿಸುತ್ತದೆ. ಕಿಚನ್ ಸಿಂಕ್, ಸ್ವಿಚ್ ಬೋರ್ಡ್, ಪ್ಲಾಸ್ಟಿಕ್ ಡಬ್ಬಗಳು, ಕಪಾಟುಗಳು ಸೇರಿದಂತೆ ಅಡುಗೆ ಮನೆಯನ್ನು ಆಕ್ರಮಿಸಿಕೊಳ್ಳುತ್ತವೆ. ಜಿರಳೆಗಳನ್ನು ಹಿಮ್ಮೆಟ್ಟಿಸಲು ವಿವಿಧ ಸ್ಪ್ರೇಗಳನ್ನು ಬಳಸುತ್ತಾರೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅವುಗಳನ್ನು ತೊಡೆದುಹಾಕಲು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಲು ತಜ್ಞರು ಸೂಚಿಸುತ್ತಾರೆ. ಜಿರಳೆಗಳನ್ನು ಹೋಗಲಾಡಿಸಲು ತಜ್ಞರು ನೀಡಿರುವ ಸಲಹೆಗಳು ಹೀಗಿವೆ.

    ಕಾಲ್ತುಳಿತ ಕೇಸ್: RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ!

    ಯಾವುದಕ್ಕೂ ಹೆದರದ ಕೆಲವರು ಜಿರಳೆಗೆ ಭಯ ಪಡುತ್ತಾರೆ. ಅದರಲ್ಲಿಯೂ ಜಿರಳೆ ಅಂದ್ರೆ ಸಾಕು ಹೆಣ್ಮಕ್ಕಳಂತೂ ಎದ್ದು, ಬಿದ್ದು ಓಡಿ ಹೋಗ್ತಾರೆ. ಮೈ ಮೇಲೆ ಜಿರಣೆ ಹರಿಯುತ್ತಿದ್ದಂತೆಯೇ ಅದನ್ನು ಸಾಯಿಸಲು ಪೊರಕೆಯನ್ನು ಹುಡುಕುತ್ತಾರೆ.

    ಅಲ್ಲದೇ ಮನೆಯಲ್ಲಿ ಜಿರಳೆಗಳು ಹೆಚ್ಚಾದರೆ ಕಾಯಿಲೆ ಕೂಡ ಹೆಚ್ಚಾದಂತೆ. ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜಿರಳೆಗಳು ಅಡ್ಡಾಡಿದ ಜಾಗದಲ್ಲಿದ್ದ ಆಹಾರ ಸೇವಿಸಬಾರದು. ಏಕೆಂದರೆ ಇದರಿಂದ ನಾನಾ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

    ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವರು ಮಂದಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಪ್ರೇಗಳನ್ನು ತಂದು ಸಿಂಪಡಿಸುತ್ತಾರೆ. ಹೀಗಿದ್ದರೂ ಮನೆಯಿಂದ ಜಿರಳೆಗಳು ಹೋಗುವುದಿಲ್ಲ. ಹಾಗಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಇವುಗಳನ್ನು ಬಳಸುವ ಮೂಲಕ ಮನೆಯಿಂದ ನೀವು ಜಿರಳೆಗಳನ್ನು ಹಿಮ್ಮೆಟ್ಟಿಸಬಹುದು.

    ಬೇವಿನ ಸೊಪ್ಪು: ಜಿರಳೆಗಳನ್ನು ತೊಡೆದುಹಾಕಲು ಬೇವಿನ ಸೊಪ್ಪು ಪ್ರಯೋಜನಕಾರಿ ಆಗಿದೆ. ರಾತ್ರಿ ಮಲಗುವ ಮುನ್ನ ಬೇವಿನ ಪುಡಿ ಅಥವಾ ಬೇವಿನ ಎಣ್ಣೆಯನ್ನು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿ. ಇದರ ವಾಸನೆಯನ್ನು ತಡೆಯಲಾರದೇ ಜಿರಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.

    ಲವಂಗ: ಜಿರಳೆಗಳನ್ನು ತೊಡೆದು ಹಾಕಲು ಲವಂಗ ಉತ್ತಮ ಪರಿಹಾರ ಎಂದೇ ಹೇಳಬಹುದು. ಇದಕ್ಕಾಗಿ ಯಾವುದೇ ರೀತಿಯ ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಕೇವಲ ಜಿರಳೆಗಳು ಓಡಾಡುವ ಸ್ಥಳದಲ್ಲಿ ಲವಂಗ ಇಟ್ಟರೆ ಸಾಕು.

    ಅಡಿಗೆ ಸೋಡಾ: ಒಂದು ಚಮಚ ಅಡಿಗೆ ಸೋಡಾದಲ್ಲಿ ಅರ್ಧ ಚಮಚ ಸಕ್ಕರೆಯನ್ನು ಬೆರೆಸಿ, ಜಿರಳೆ ಪ್ರವೇಶಿಸುವ ಬಿರುಕು ಮತ್ತು ಜಿರಳೆ ಕಟ್ಟಿದ ಗೂಡಿಗೆ ಹಾಕಿ. ಇದನ್ನು ತಿಂದು ಜಿರಳೆಗಳು ಸಾಯುತ್ತವೆ.

    Demo
    Share. Facebook Twitter LinkedIn Email WhatsApp

    Related Posts

    ಬಿಳಿ ಕೂದಲು ಕಪ್ಪಾಗಬೇಕಾ!? ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಎಣ್ಣೆ ಹಚ್ಚಿ.. ಆಮೇಲೆ ನೋಡಿ ಚಮತ್ಕಾರ!

    June 6, 2025

    ಖಾರ ಅಂತ ಹಸಿಮೆಣಸಿನಕಾಯಿ ತಿನ್ನೋದು ಬಿಡಬೇಡಿ.. ಇದರಿಂದ ಸಿಗುವ ಬೆನಿಫಿಟ್ ಸಾಕಷ್ಟು!

    June 6, 2025

    ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?

    June 6, 2025

    ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಡಾ. ಕೌಶಿಕ್ ಸುಬ್ರಮಣಿಯನ್

    June 6, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 5, 2025

    ಬಿಳಿ ಕೂದಲಿನ ಸಮಸ್ಯೆಯೇ!? ವಾರದಲ್ಲಿ 2 ಬಾರಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತಂತೆ!

    June 5, 2025

    ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!

    June 5, 2025

    Periods: ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ!

    June 5, 2025

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    June 5, 2025

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    June 4, 2025

    ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!

    June 3, 2025

    ಹಾರ್ಟ್ ಅಟ್ಯಾಕ್ ಆಗೋ ಮುನ್ನ ಕಾಣಿಸಿಕೊಳ್ಳುವ ಐದು ಲಕ್ಷಣಗಳಿವು!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.