ಕಾಮಿಡಿ ಕಿಲಾಡಿಗಳು ಖ್ಯಾತಿ ರಾಕೇಶ್ ಪೂಜಾರಿ ಇಂದು ಕೊನೆಯುಸಿರೆಳೆದಿದ್ದಾರೆ. ಬಾಳಿ ಬದುಕ ಬೇಕಿದ್ದ ರಾಕೇಶ್ ವಿಧಿಯಾಟಕ್ಕೆ ಶರಣಾಗಿದ್ದಾರೆ. ಹೃದಯಾಘಾತದಿಂದ ರಾಕೇಶ್ ನಿಧನರಾಗಿದ್ದು, ಅವರ ಆತ್ಮೀಯರು. ಸ್ನೇಹಿತರು, ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ತಮ್ಮ ಹಾಸ್ಯದ ಮೂಲಕ ಪ್ರೇಕ್ಷರ ಮುಖದಲ್ಲಿ ನಗುಮೂಡಿಸುತ್ತಿದ್ದ ರಾಕೇಶ್ ದರ್ಶನ್ ಅಂದ್ರೆ ಅಚ್ಚುಮೆಚ್ಚು. ಅವರನ್ನು ಭೇಟಿಯಾಗಬೇಕು ಎಂದು ಅವರಿಗೆ ಕನಸಿತ್ತು. ಆ ಕನಸು ನನಸಾದಾಗ, ದಾಸನ್ನು ಮೊದಲು ಭೇಟಯಾದ ಕ್ಷಣದ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಸುಂದರ ಸಾಲುಗಳನ್ನು ಬರೆದುಕೊಂಡಿದ್ದರು.
ನನಸಾಯಿತು ಬಹುಕಾಲದ ಕನಸು…
ಬಾನೆತ್ತರದ ನಕ್ಷತ್ರವೇ…
ಬಳಿನಿಂತು…ನಗೆಬೀರಿತು..
ಮುದ್ದಾಡಿತು….
ಕನಸಲ್ಲ ನನಸಿದು….
ಮರೆಯದ ನೆನಪಿದು.
With ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್
ಎಂದು ದರ್ಶನ್ ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡು ರಾಕೇಶ್ ಪೂಜಾರಿ ಸಂತಸಪಟ್ಟಿದ್ದರು.
View this post on Instagram
ಕಂಬನಿ ಮಿಡಿದ ರಕ್ಷಿತಾ!
ರಾಕೇಶ್ ಪೂಜಾರಿ ಸಾವಿಗೆ ರಕ್ಷಿತಾ ಪ್ರೇಮ್ ಕಂಬನಿ ಮಿಡಿದಿದ್ದಾರೆ. ರಾಕೇಶ್ ಬಳಿ ಇನ್ಯಾವಗಲೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾದ ಶೋ. ಈ ಶೋನ ಸ್ಪರ್ಧಿ ರಾಕೇಶ್ ಒಳ್ಳೆಯ ವ್ಯಕ್ತಿ ಆಗಿ ಕಾಣಿಸಿದ್ದರು’ ಎಂದು ಪೋಸ್ಟ್ ಹಾಕಿದ್ದಾರೆ. ಕಾಮಿಡಿ ಕಿಲಾಡಿಯಲ್ಲಿ ರಕ್ಷಿತಾ ಪ್ರೇಮ್ ಜಡ್ಜ್ ಆಗಿದ್ದರು. ಹೀಗಾಗಿ, ಅವರ ಜೊತೆ ರಾಕೇಶ್ಗೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು.