ಬೆಂಗಳೂರು: ಕಾಮಿಡಿ ಕಿಲಾಡಿಗಳು ಮಡೆನೂರು ಮನು ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಸಹಕಲಾವಿದೆಯೇ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮನು ಅವರ ಪತ್ನಿ ಮಾತನಾಡಿದ್ದಾರೆ. ಮನು ಪತಿಯ ಪರ ಬ್ಯಾಟ್ ಬೀಸಿದ್ದಾರೆ. ‘ನನ್ನ ಪತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಗಂಡನ ಪರ ನಾನು ನಿಲ್ಲುತ್ತೇನೆ. ಅವನು ತಪ್ಪು ಮಾಡಿಲ್ಲ. ನ್ಯಾಯ ಸಿಗೋವರೆಗೆ ಹೋರಾಡುತ್ತೇನೆ’ ಎಂದಿದ್ದಾರೆ ಅವರು.
“ಆರು ತಿಂಗಳಿನಿಂದ ನನ್ನ ಗಂಡ ತುಂಬ ಕಷ್ಟಪಟ್ಟು ಬಾಡಿ ಬಿಲ್ಡಿಂಗ್ ಮಾಡಿದ್ದಾರೆ. ಬಾಡಿ ಬಿಲ್ಡಿಂಗ್ ಮಾಡೋದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದೆ. ಮೂರು ವರ್ಷಗಳಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಇಂದು ನನ್ನ ಗಂಡ ಥಿಯೇಟರ್ನಲ್ಲಿ ಇಲ್ಲ. ನನಗೆ ಈ ವಿಷಯ ತುಂಬ ಬೇಸರ ಆಗಿದೆ. ನಿರ್ಮಾಪಕರು, ನಿರ್ದೇಶಕರು, ತಾರಾ ಬಳಕ ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಯಾರಿಗೂ ಮೋಸ ಆಗಬಾರದು, ಎಲ್ಲರೂ ಸಿನಿಮಾ ನೋಡಿ” ಎಂದು ಮನು ಪತ್ನಿ ಹೇಳಿದ್ದಾರೆ.
“ನನ್ನ ಗಂಡ ಈ ರೀತಿ ಮಾಡ್ತಿದ್ರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್ ರಿಹರ್ಸಲ್ ಹೇಗಿರತ್ತೋ ಹಾಗೆ ಇಲ್ಲಿಯೂ ಏನೋ ಆಗಿರತ್ತೆ. ಎಲ್ಲದಕ್ಕೂ ತನಿಖೆ ಆಗಬೇಕು, ಸತ್ಯ ಹೊರಗಡೆ ಬರಬೇಕು” ಎಂದು ಹೇಳಿದ್ದಾರೆ.