ಬೆಂಗಳೂರು: ನಿನ್ನೆಯಿಂದ ಮಡೆನೂರು ಮನು ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಸುದ್ದಿ ಮಾಡುತ್ತಿದೆ. ಸಹನಟಿ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ ಮನು ಈಗ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಲಾಕ್ ಆಗಿದ್ದಾನೆ. ಅತ್ತ ಖಾಕಿ ತನಿಖೆ ಮುಂದುವರೆಸಿದ್ದು, ಇತ್ತ ಅತ್ಯಾಚಾರದ ಸಂತ್ರಸ್ತೆ ಫೇಸ್ ಬುಕ್ ಲೈವ್ ಬಂದು ಗಳಗಳ ಅತ್ತಿದ್ದಾರೆ.
ಮಡೆನೂರು ಮನು ಮನೆ ಸಹನಟಿಯಿಂದ ಅತ್ಯಾಚಾರ ಆರೋಪ ಕೇಳಿ ಬರ್ತಿದ್ದಂತೆ, ಸಂತ್ರೆಸ್ತೆ ವಿರುದ್ಧ ಭಾರೀ ಟೇಕೆಗಳು ವ್ಯಕ್ತವಾಗಿದ್ದವು. 2022ರಲ್ಲಿ ಅತ್ಯಾಚಾರ ಆಗಿದ್ರೆ ಈಗ ಯಾಕೆ ಈಕೆ ಕಂಪ್ಲೇಂಟ್ ಕೊಡೋದಿಕ್ಕೆ ಬಂದಿದ್ದಾರೆ ಅಂತೆಲ್ಲಾ ಸಂತ್ರಸ್ತೆ ಮೇಲೆ ಕಮೆಂಟ್ ಮಾಡಲಾಗಿತ್ತು. ಅದಕ್ಕೀಗ ಸಂತ್ರಸ್ತೆ ಫೇಸ್ ಬುಕ್ ಲೈವ್ ಬಂದು ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಇಷ್ಟು ದಿನ ಆಸ್ಪತ್ರೆಯಲ್ಲಿದ್ದೆ. ಹುಷಾರು ಮಾಡಿಕೊಂಡು ಬಂದಿದ್ದೇನೆ. ಕಳೆದ ಶನಿವಾರ ಬೆಳಗ್ಗಿನ ಜಾವ 12.30ಕ್ಕೆ ಮನೆ ಬಂದು ಹಿಂಸೆಯಿಂದ ಮೂಗು ಮುಚ್ಚಿಸಿ ಎಣ್ಣೆ ಕುಡಿಸಿ ಲೈಂಗಿಕ ದೌರ್ಜನ್ಯ ಮಾಡಿ ಖಾಸಗಿ ವಿಡಿಯೋ ಮಾಡಿದ್ದಾನೆ. ಆ ವಿಕೃತಿ ಮೆರೆದರೆ ಕೂಡ ಕಂಪ್ಲೇಂಟ್ ಕೊಡಬಾರದಿತ್ತಾ? ಇದು ನಿಮಗೆ ಈವಾಗ ಸುದ್ದಿ ಗೊತ್ತಿದೆ. ನಾನು ಅವನಿಗೆ ಭಾನುವಾರ ಫೋನ್ ಮಾಡಿ ಕಂಪ್ಲೇಂಟ್ ಕೊಡುತ್ತೇನೆ ಎಂದು ಹೇಳಿದ್ದೇನೆ. ಸಿನಿಮಾ ಟೈಮ್ ನಲ್ಲಿ ನಾನು ಕಂಪ್ಲೇಂಟ್ ಕೊಟ್ಟಿಲ್ಲ. ಅವನು ವಿಡಿಯೋ ಮಾಡಿಕೊಂಡು ಹೋದರೂ ಕಂಪ್ಲೇಂಟ್ ಕೊಡುವ ಆಗಿಲ್ವಾ? ಅತ್ಯಾಚಾರ ಆಗಿ ಸಾಯಿಸಿದ್ರೆ ಮಾತ್ರ ಜಸ್ಟೀಸ್ಟ್ ಫಾರ್ ಸೋಕಾಲ್ಡ್ ಎನ್ನುತ್ತೀರಾ? ಬದುಕಿದ್ದಾಗ ನ್ಯಾಯಾ ಅಂದ್ರೆ ಈ ರೀತಿ ಮಾಡುತ್ತೀರಾ ಎಂದು ಗಳಗಳ ಅಂತಿದ್ದಾರೆ.