ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂತಾಪುರ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಬರುವ ತುಮಟಿ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಸಂಡೂರು ಹಾಗೂ ಗ್ರಾಮ್ಸ್ (GRAMS), ಲಿಂಗಸ್ಗೂರು ಅನುಷ್ಠಾನ ಸಂಸ್ಥೆಯ ವತಿಯಿಂದ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ (CEPMIZ) ಅಡಿಯಲ್ಲಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ (ಪಿ.ಆರ್. ಎ) ಮಾಡಲಾಯಿತು.
ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಂಡದ ನಾಯಕರಾದ ಎ ಕೊಟ್ರೇಶ್ ಅವರು ಗಣಿಬಾದಿತ ಪ್ರದೇಶದಲ್ಲಿ ನಾಶವಾಗಿರುವ ಮೇಲ್ಮಣ್ಣನ್ನು ಪುನರ್ ಸ್ಥಾಪಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮೂಲಕ ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸಿ ವ್ಯವಸಾಯಕ್ಕೆ ಯೋಗ್ಯವನ್ನಾಗಿಸುವ ಮೂಲಕ ರೈತರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರತೆಯನ್ನು ಪಡೆಯಲು ಈ ಒಂದು ಯೋಜನೆ ಅನುಷ್ಠಾನವಾಗುತ್ತಿದೆ ಎಂದು ಹೇಳಿದರು.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಮತ್ತು ಈ ಒಂದು ಸಮುದಾಯ ಸಹಭಾಗಿತ್ವ ಕಾರ್ಯಕ್ರಮ ವನ್ನು ಯೋಜನಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮಾಡಲಾಗುತ್ತದೆ ಈ ಒಂದು ಕಾರ್ಯಕ್ರಮದ ಮೂಲಕ ರೈತರಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕು, ಸಂರಕ್ಷಣೆಯನ್ನು ಮಾಡಲು ಯಾವ ರೀತಿಯಾಗಿ ಉಪಚಾರಗಳನ್ನು ಮಾಡಬೇಕು ಮತ್ತು ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಅಗತ್ಯವಿರುವ ಮಾಹಿತಿಯ ದಾಖಲೆಗಳನ್ನು ಪಡೆದುಕೊಳ್ಳಲು ಸಮೀಕ್ಷೆ ಮಾಡಲಾಗುತ್ತದೆ.
ಆದ್ದರಿಂದ ಗ್ರಾಮದ ಎಲ್ಲಾ ರೈತರು ಸರಿಯಾಗಿ ಮಾಹಿತಿ ಕೊಡಬೇಕು ಎಂದು ಹೇಳಿದರು ಹಾಗೂ ಐಜಿಎ ಪರಿಣಿತರಾದ ಶ್ರೀಮತಿ ಹೆಚ್ ಮಂಜುಳ ಅವರು ಮಾತನಾಡಿ ಸೂಕ್ತವೆನಿಸುವ ಮಣ್ಣು ಮತ್ತು ನೀರಿನ ಸಂರಕ್ಷಣೆ ಉಪಚಾರಗಳನ್ನು, ತೋಟಗಾರಿಕೆ, ಅರಣ್ಯೀಕರಣ, ಜೀವನೋಪಾಯ ಚಟುವಟಿಕೆಗಳು ಮಾಡಲಾಗುತ್ತದೆ. ಮತ್ತು ರೈತರು ತಿಳಿಸಿದಂತಹ ಉಪಚಾರಗಳನ್ನು ಯೋಜನಾ ವಿಸ್ತೃತ ವರದಿಯಲ್ಲಿ ನಿಯಮಾನಸಾರ ನಮೂದಿಸಿ ಜಿಲ್ಲಾ ಮಟ್ಟದ ಸಭೆಯಲ್ಲಿ ಅನುಮೋದನೆಯನ್ನು ಪಡೆದು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತದೆ. ಈ ಒಂದು ಯೋಜನೆಯನ್ನು ಘನ ಉಚ್ಚ ನ್ಯಾಯಾಲಯ ನಿರ್ದೇಶನಾದ ಮೇರೆಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಅನುಷ್ಠಾನವಾಗುತ್ತದೆ.
ಮತ್ತು ಎಲ್ಲಾ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಮಾಡಲು ಹಿಟ್ಟಿನ ಗಿರಾಣಿ ಶಾವಿಗೆ ಮಿಷನ್ ರೊಟ್ಟಿ ಮಿಷನ್ ಟೈಲರಿಂಗ್ ತರಬೇತಿ ಹೈನುಗಾರಿಕೆ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಮಾಡಿಕೊಳ್ಳಲು (CEPMIZ) ಯೋಜನೆಯಿಂದ ಪಡೆದುಕೊಳ್ಳಬಹುದು ಎಂದರು ಹಾಗೂ ನಕ್ಷೆಯ ಮೂಲಕ ಗ್ರಾಮಸ್ಥರಿಗೆ ಮನ ಮುಟ್ಟುವಂತೆ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿಗಳಾದ ಶಶಿಕುಮಾರ್ ಮತ್ತು ಎನ್ ಆರ್ ಎಲ್ ಎಂ ಸಿಬ್ಬಂದಿಗಳಾದ ಶೃತಿ ಕವಿತ ಮಹಾಲಕ್ಷ್ಮಿ ಗ್ರಾಮದ ರೈತರು ಹಾಗೂ ಊರಿನ ಮುಖಂಡರು ಸಂಜೀವಿನಿ ಒಕ್ಕೂಟ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.