ಕೋಲಾರ: ಭಯೋತ್ಪಾದಕರು ವಿನಾಕಾರಣ ನಮ್ಮ ಜನರ ಮೇಲೆ ದಾಳಿ ಮಾಡಿದ್ದಕ್ಕೆ ಸಂಘರ್ಷ ಉಂಟಾಗುತ್ತಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ರಾಜ್ಯಭಾರ ಮಾಡಿದರು. ಆಗ ಅವರನ್ನು ನಾವು ಯುದ್ಧದಿಂದ ಗೆದ್ದಿಲ್ಲ, ಶಾಂತಿಯಿಂದ ಗೆದಿದ್ದು,
ಗಾಂಧೀಜಿಯವರು ನಾವು ಶಾಂತಿಯಿಂದ ಸಾಧನೆ ಮಾಡಬೇಕೆಂದು ಹೇಳಿದ್ದಾರೆ. ಭಯೋತ್ಪಾದಕರು ವಿನಾಕಾರಣ ನಮ್ಮ ಜನರ ಮೇಲೆ ದಾಳಿ ಮಾಡಿದ್ದಕ್ಕೆ ಸಂಘರ್ಷ ಉಂಟಾಗುತ್ತಿದೆ. ನಾವು ಪಾಕಿಸ್ತಾನ ಮೇಲೆ ಯುದ್ಧ ಮಾಡಿಲ್ಲ, ನಾಗರಿಕರ ಮೇಲೆ ದಾಳಿ ಮಾಡಿಲ್ಲ, ಆದರೆ ಭಾರತೀಯ ಸೇನೆ ಭಯೋತ್ಪಾದಕರ ಮೇಲೆ ಪ್ರಹಾರ ಮಾಡಿದ್ದಾರೆ ಎಂದರು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ವ್ಯಾಜ್ಯ ಆಗುವಾಗ ಹಿರಿಯರೊಬ್ಬರು ಬಂದು ಯುದ್ಧ ಬೇಡವೆಂದಾಗ ಅವರಿಗೆ ಗೌರವ ಕೊಡಬೇಕು, ಭಾರತದ ಪ್ರಧಾನಿಯವರು ಅಮೆರಿಕ ದೇಶಕ್ಕೆ ಗೌರವ ಕೊಟ್ಟಿದ್ದಾರೆ. ಭಾರತ ದೇಶ ನಾಗರಿಕರನ್ನು ಕಳೆದುಕೊಂಡಿದೆ, ಕಲಹದಿಂದ, ಯುದ್ಧದಿಂದ ಸಾಧನೆ ಮಾಡಲು ಸಾಧ್ಯವಿಲ್ಲ, ನಾವೆಲ್ಲರೂ ಮಾನವರು, ಮಾನವರಾಗಿ ಬಾಳೋಣ, ಅವರವರ ಧರ್ಮ ಅವರು ಪಾಲನೆ ಮಾಡಿಕೊಳ್ಳಲಿ ಎಂದು ತಿಳಿಸಿದರು.