ಭಾನುವಾರ ದೆಹಲಿಯಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ಏರ್ಪಟ್ಟಿತು. ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ RCB ಬೊಂಬಾಟ್ ಬೌಲಿಂಗ್ ಪ್ರದರ್ಶಿಸಿ ಎದುರಾಳಿಯನ್ನು ಕೇವಲ 163 ರನ್ ಗಳಿಗೆ ಕಟ್ಟಿ ಹಾಕಿದರು.
ಜಾಗದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ತಮ್ಮನ ಮಗ, ಅಳಿಯನಿಂದ ಸುಪಾರಿ ಶಂಕೆ.. ಆಸ್ಪತ್ರೆಯಲ್ಲಿ ನರಳುತ್ತಿರುವ ಆಟೋ ಚಾಲಕ!
ನಂತರ ಬ್ಯಾಟ್ ಹಿಡಿದು ಬಂದ RCB, ಮೊದಲ ಮೂರು ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸೋಲುವ ಭೀತಿ ಉಂಟು ಮಾಡಿತ್ತು. ಆದ್ರೆ ಕೊಹ್ಲಿಯ ತಾಳ್ಮೆ ಆಟ ಕೃನಾಲ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ 18 ಓವರ್ ನಲ್ಲೇ ಟಾರ್ಗೆಟ್ ರೀಚ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರು ತಂಡ ಗೆದ್ದುಕೊಂಡಿದೆ.
6 ವಿಕೆಟ್‌ಗಳ ಜಯಗಳಿಸಿದ ಬಳಿಕ ರಾಹುಲ್ ಜೊತೆ ಕೊಹ್ಲಿ ಸಂತೋಷದಿಂದ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ನೆಲಕ್ಕೆ ಕೈ ತೋರಿಸುತ್ತಾ ಇದು ನನ್ನ ಮೈದಾನ ಹೇಳಿದರು. ಇದಕ್ಕೆ ರಾಹುಲ್, ಪೆವಿಲಿಯನ್‌ಗೆ ಕೊಹ್ಲಿ ಹೆಸರು ಇದೆ ಎಂದು ಸನ್ನೆ ಮಾಡಿದರು. ನಂತರ ಕೊಹ್ಲಿ ರಾಹುಲ್ ಅವರನ್ನು ಅಪ್ಪಿ ಮಾತನಾಡಿದರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂಲತ: ದೆಹಲಿಯವರಾದ ಕೊಹ್ಲಿ ಈ ಮೈದಾನದಲ್ಲೇ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಒಂದು ಸ್ಟ್ಯಾಂಡ್‌ಗೆ ‘ವಿರಾಟ್ ಕೊಹ್ಲಿ ಪೆವಿಲಿಯನ್’ ಎಂದು ಹೆಸರನ್ನು ಇಡಲಾಗಿದೆ.