ಬೆಂಗಳೂರು: ಒಳ ಮೀಸಲಾತಿ ನೀಡುವ ಸಲುವಾಗಿ 101 ಪರಿಶಿಷ್ಟ ಜಾತಿ ಡಾಟಾ ಸಂಗ್ರಹ ನೆಪದದಲ್ಲಿ ಮರು ಜಾತಿ ಗಣತಿ ನಡೆಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಜಾರ ಗೊಂದಲ ಸೃಷ್ಟಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ಮಾಡೋಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಕಾಂಗ್ರೆಸ್ ನಾಯಕತ್ವ ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ: ಸಚಿವ ದಿನೇಶ್ ಗುಂಡೂರಾವ್
ಬ್ರಿಟೀಷ್ ಸರ್ಕಾರವೇ 1931ರವರೆಗೆ ಜಾತಿ ಗಣತಿ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ಜಾತಿಗಣತಿ ಮಾಡಲಿಲ್ಲ. 2011ರಲ್ಲಿ ಜಾತಿ ಗಣತಿ ಮಾಡಿಸಬಹುದಿತ್ತು.. ಆಗ ಇವರದ್ದೇ ಕಾಂಗ್ರೆಸ್ ಸರ್ಕಾರ ಇತ್ತಲ್ಲ.. ಯಾಕೆ ಮಾಡಿಸಲಿಲ್ಲ ಎಂದು ಛಲವಾದಿ. ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಜಾತಿ ಗಣತಿ ಮಾಡದ ಹಿನ್ನೆಲೆಯೆಲ್ಲಿ ಅದಕ್ಕೆ ಮೋದಿ ಘೋಷಣೆ ಮಾಡಿದ್ದಾರೆ. ನೀವು ಸರ್ವೆ ಮಾಡಿದ್ರೆ ದ್ರೊಹ ಮಾಡಿದಂತೆ.. ನೀವು ಜಾತಿಗಣತಿ ಮಾಡೋಕೆ ಬರಲ್ಲ ಆರ್ಥಿಕ, ಸಾಮಾಹಿಕ ಸಮೀಕ್ಷೆ ಮಾಡಬಹುದು. ನೀವು ಮಾಡಿ ಸಮಸ್ಯೆ ಇಲ್ಲ, ಆದರೆ ಮೀಸಲಾತಿ ಕೊಡೋಕೆ ಸಾಧ್ಯವೇ..? ಮತ್ತೆ ಕೇಂದ್ರಕ್ಕೆ ಹೋಗಬೇಕಲ್ಲ..ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ. ಮಾಡಿದ್ದಾರೆ..