ಮೈಸೂರು: ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಸಿಎಂ ಮಾಡುತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಐಟಿಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ. ಇದೇ ರೀತಿ ಕೂಗು ಮಾರಿ ರೀತಿ ಮಾತನಾಡುತ್ತಿದ್ರೆ, ನಿಮಗೆ ಒಳ್ಳೆಯದು ಆಗಲ್ಲ. ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಸಿಎಂ ಮಾಡುತ್ತಾ? ಆರ್‌ಎಸ್‌ಎಸ್ ಅನ್ನು ಬೈದ್ರೆ ಅಧಿಕಾರ ಸಿಗಲ್ಲ ಎಂದು ಟೀಕಿಸಿದ್ದಾರೆ.
ಸಚಿವ ಸಂತೋಷ ಲಾಡ್ ಸಹ ಮೇಧಾವಿ ರೀತಿ ಮಾತನಾಡುತ್ತಾರೆ. ಮೋದಿಗೆ ನೀವು ಪಾಠ ಮಾಡುತ್ತೀರಾ? ಈ ದೇಶದ ಅರ್ಥ ವ್ಯವಸ್ಥೆಯನ್ನ ನಿರ್ವಹಣೆ ಮಾಡುವುದು ಸಂಡೂರು ಮೈನ್ಸ್ನಿಂದ ಅದಿರು ಕದ್ದು ಮಾರಾಟ ಮಾಡಿದ್ರಲ್ಲ ಆ ರೀತಿನಾ? ಒಂದು ಪರ್ಮಿಟ್‌ನಲ್ಲಿ 10 ಲಾರಿ ಅದಿರು ಸಾಗಿಸಿ ದುಡ್ಡು ಮಾಡಿದ್ದಂಗೆ ಅಲ್ಲ, ದೇಶದ ಆರ್ಥಿಕತೆ ಎಂದು ಕಿಡಿಕಾರಿದ್ದಾರೆ.