ಹಾಸನ : ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ವಿಚಾರ ಸದ್ದು ಮಾಡುತ್ತಿದೆ. ಇದರ ನಡುವೆಯೇ ಸಿಎಂ ಬದಲಾವಣೆ ಶತ ಸಿದ್ದ ಎಂದಿದ್ದ ಆರ್.ಅಶೋಕ್‌ಗೆ ಗಿಳಿಶಾಸ್ತ್ರ ಅಂತಾ ಕಾಂಗ್ರೆಸ್ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್‌ಗೆ ನೇರಾನೇರಾ ಸವಾಲು ಎಸೆದಿದ್ದಾರೆ.
ಜಿಲ್ಲೆಯ ಆಲೂರು ತಾಲೂಕಿನ ಧರ್ಮಪುರಿಯಲ್ಲಿ ಮಾತನಾಡಿದ ಅವರು, ನನ್ನ ಶಾಸ್ತ್ರನೇ ನಿಜವಾಗಿ ಹೋಯ್ತಲ್ಲ. ನಾನೊಬ್ಬ ಅಲ್ಲ, ಕಾಂಗ್ರೆಸ್ ಎಂಎಲ್ ಎ ಹೇಳ್ತಿದ್ದಿರಲ್ಲ. ರಾಮನಗರ ಎಂಎಲ್ ಎ ಹೇಳ್ತಿದ್ದರಲ್ಲ. ನೋಟಿಸ್ ಕೊಟ್ಟ ಮೇಲೂ ಏನ್ ಮಾಡಿಕೊಳ್ತಿರೋ ಮಾಡ್ಕೊಳ್ಳಿ ಅಂತ ಹೇಳ್ತಿದ್ದಾರೆ. ಏನು ಮಾಡ್ತಾರೆ ಅವರನ್ನೆ, ಸಸ್ಪೆಂಡ್ ಮಾಡ್ತಾರಾ..? ಗುಂಡಿಕ್ಕಿ ಹೊಡೀತಾರ ಅವನನ್ನ..? ಅಂತಾ ಪ್ರಶ್ನಿಸಿದ್ದಾರೆ.
ಇನ್ನೂ ಕಾಂಗ್ರೆಸ್ ನಾಯಕರು ಒಂದು ಕಡೆ ನೋಟೀಸ್ ಕೊಡುತ್ತಾರೆ. ಇನ್ನೊಂದ್ಕಡೆ ಅಭಿಮಾನದಿಂದ ಹೇಳಿದ್ದಾರೆ ಸಿಎಂ ಆಗಲಿ ಅಂತಾ ಅಲ್ಲಿಗೆ ಅರ್ಥಾಯ್ತಲ್ಲ, ಇದೆಲ್ಲ ಮ್ಯಾಚ್ ಫಿಕ್ಸಿಂಗ್. ಎರಡೂವರೆ ವರ್ಷ , ಎರಡೂವರೆ ವರ್ಷ ಮ್ಯಾಚ್ ಫಿಕ್ಸಿಂಗ್ . ನಾನು ಡೇಟ್ ಕೊಟ್ಟಿದ್ದೀನಿ , ಸೆಪ್ಟೆಂಬರ್ ನವೆಂಬರ್ ಲಿ ಆಗುತ್ತೆ ಅಂತಾ ಆದಾಗ ಏನಂತಾರೆ, ಹೇಳಬೇಕಲ್ವ ಎಂದರು.
ಅನೌನ್ಸ್ ಮಾಡಬೇಕಾದವರು ಯಾರೂ..? ಖರ್ಗೆಯವರು ಅವರ ಬಾಯಲ್ಲಿ ಹೇಳಿಸಿಬಿಡಿ. ನಾವು 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಂತ ಅನೌನ್ಸ್ ಮಾಡಿಸಿ, ಮುಗಿದುಹೋಯ್ತಲ್ಲ. ನಾವ್ ಕವಡೆ ಶಾಸ್ರ್ತನೂ ಇಲ್ಲ, ಗಿಳಿ ಶಾಸ್ತ್ರ , ಎಲೆ ಶಾಸ್ತ್ರ ನೂ ಇಲ್ಲ. ಇಲ್ಲಿ ಕರ್ನಾಟಕ ದಲ್ಲಿರೋ ಅಧ್ಯಕ್ಷರು ಹೇಳಲಿ. ನಾನೂ ಮುಖ್ಯಮಂತ್ರಿ ಆಗಲ್ಲ ಅಂತ ಅನೌನ್ಸ್ ಮಾಡಿಸಲಿ, ನಾನೇ ನಾಳೇನೆ ಬಿಟ್ಟು ಬಿಡ್ತೀನಿ ಅಂತಾ ಸವಾಲ್ ಎಸೆದರು.