ಮೈಸೂರು: ಪಾಕಿಸ್ತಾನದ ಮೇಲೆ ಯುದ್ದ ಅಂದರೆ ಕಾಂಗ್ರೆಸ್ ಗೆ ಹಿಂಸೆ ಅನ್ನಿಸುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್,ಸಾವರ್ಕರ್ ಯುದ್ದ ಮಾಡಿದ ಮೇಲೆ ಸ್ವಾತಂತ್ರ್ಯ ಬಂದಿದ್ದು.
ಗಾಂಧೀಜಿಯ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಬರಲಿಲ್ಲ. ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್ ರಂಥ ಕ್ರಾಂತಿ ಕಾರಿಗಳ ಕೊಡುಗೆಯೂ ಮುಖ್ಯ ಆಗಿದೆ.ಪಾಕಿಸ್ತಾನ ಸೃಷ್ಟಿ ಆಗಲು ಕಾರಣ ಕಾಂಗ್ರೆಸ್ ಕಾರಣ ಪಾಕಿಸ್ತಾನದ ಪಿತಾಮಹ ಕಾಂಗ್ರೆಸ್,
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಕಾಂಗ್ರೆಸ್ ಹುಟ್ಟಿಸಿದ ಶಿಶು ಪಾಕಿಸ್ತಾನ ಹೀಗಾಗಿ ಪಾಕಿಸ್ತಾನದ ಮೇಲೆ ಯುದ್ದ ಅಂದರೆ ಕಾಂಗ್ರೆಸ್ ಗೆ ಹಿಂಸೆ ಅನ್ನಿಸುತ್ತದೆ. ಕಾಂಗ್ರೆಸ್ ಮನಸ್ಥಿತಿ ಅರ್ಥ ಮಾಡಿಕೊಳ್ಳ ಬೇಕು ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ಭೀಕರ ಹತ್ಯಾಕಾಂಡ ನಡೆದ ಎರಡು ವಾರಗಳಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ಮುಂಜಾನೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಒಂಬತ್ತು ನೆಲೆಗಳನ್ನು 25 ನಿಮಿಷಗಳಲ್ಲೇ ಧ್ವಂಸಗೊಳಿಸಿವೆ.
ಎರಡೂವರೆ ದಶಕಗಳಿಂದ ಭಾರತಕ್ಕೆ ತಲೆನೋವಾಗಿರುವ ಜಾಗತಿಕ ಉಗ್ರ ಮಸೂದ್ ಅಜರ್ನ ಕುಟುಂಬದ 10 ಸದಸ್ಯರು ಹಾಗೂ ನಾಲ್ವರು ಆಪ್ತರ ಮೇಲೆ ದಾಳಿ ನಡೆಸಲಾಯಿತು. 14 ಮಂದಿ ಸತ್ತಿರುವು ದನ್ನು ಮಸೂದ್ ಅಜರ್ ಕೂಡ ಖಚಿತಪಡಿಸಲಾಗಿದೆ. ಕ್ಷಿಪ್ರ ದಾಳಿಯಲ್ಲಿ 70ರಿಂದ 100 ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ.