ಬೆಂಗಳೂರು:- ಕೇಂದ್ರದಲ್ಲಿ ಇನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆ ಮಲ್ಲ್ಲಿಕಾರ್ಜುನ ಖರ್ಗೆ ಅವರ ನಾಯಕನಾಗಿರುವ ರಾಹುಲ್ ಗಾಂಧಿಯವರ ಅಜ್ಜಿ ಮತ್ತು ಮುತ್ತಾತನಿಂದಲೂ ಆರೆಸ್ಸೆಸ್ ಅನ್ನು ಬ್ಯಾನ್ ಮಾಡೋದು ಸಾಧ್ಯವಾಗಿರಲಿಲ್ಲ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಬ್ಯಾನ್ ಮಾಡಿದಾಗ ಅವರ ಸರ್ಕಾರವೇ ಬಿದ್ದು ಹೋಗಿತ್ತು.
ಪ್ರಿಯಾಂಕ್ ತಾವು ಓದಿರುವಷ್ಟನ್ನು ಮಾತ್ರ ಹೇಳುತ್ತಾರೆ, ಇಂದಿರಾ ಗಾಂಧಿ ಅವರ ತಂದೆ ಪಂಡಿತ್ ಜವಾಹರಲಾಲ್ ನೆಹರೂ ಆರೆಸ್ಸೆಸ್ ಮೇಲೆ ಬಹಿಷ್ಕಾರ ಹೇರಿದ್ದಾಗ ಒಂದು ಆಯೋಗ ರಚಿಸಲಾಗಿತ್ತು, ವಿಚಾರಣೆ ಸಮಯದಲ್ಲಿ ಸಂಘಟನೆ ವಿರುದ್ಧ ಮಾಡಿದ ಅರೋಪಗಳೆಲ್ಲ ಸುಳ್ಳು ಅಂತ ಸಾಬೀತಾಗಿತ್ತು ಎಂದು ಜೋಶಿ ಹೇಳಿದರು. ಕಾಂಗ್ರೆಸ್ ನಿಂದ ಯಾವತ್ತೂ ಆರೆಸ್ಸೆಸ್ ಬ್ಯಾನ್ ಮಾಡಲಾಗಲ್ಲ, ಅದು ತನ್ನ ಅಸ್ತಿತ್ವದ 100 ನೇ ವರ್ಷ ಆಚರಿಸುತ್ತಿದೆ ಎಂದರು.