ಬೆಂಗಳೂರು:- ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್ನ ಓಲೈಕೆ ರಾಜಕೀಯ ಕಾರಣ ಎಂದು CT ರವಿ ಹೇಳಿದ್ದಾರೆ.
ಕೊಡಗಿನ ಇಲ್ಲೆಲ್ಲಾ ನಾಳೆ ಇರಲ್ಲ ಪವರ್: ಎಲ್ಲೆಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ನವ್ರು ದನಗಳ್ಳರು ಸತ್ತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಕೊಟ್ಟಿದ್ರು ಎಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಭೇಟಿ ಕೊಡದ ಕಾಂಗ್ರೆಸ್ ನಾಯಕರ ನಡೆಗೆ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ.
ದನಗಳ್ಳರಾಗಿದ್ದ ಇದ್ರಿಸ್ ಪಾಷ ಹಾಗೂ ಕಬೀರ್ ಸತ್ತಾಗ ಕಾಂಗ್ರೆಸ್ ನಾಯಕರು ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ, ಒಬ್ರಿಗೆ 10 ಲಕ್ಷ ರೂ. ಇನ್ನೊಬ್ಬರಿಗೆ 25 ಲಕ್ಷ ರೂ. ಪರಿಹಾರವನ್ನೂ ಕೊಟ್ಟು ಬಂದ್ರು. ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಕೇಸ್ಗಳನ್ನು ವಾಪಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾಗಿದ್ರಾ? ಅವರ ಮೇಲೆ ದೊಂಬಿ ಗಲಭೆ, ಠಾಣೆಗೆ ಬೆಂಕಿ ಹಾಕಿದ ಕೇಸ್ಗಳಿವೆ. ಯಾರ್ಯಾರು ಯಾವ್ಯಾವ ಕಾರಣಕ್ಕೆ ರೌಡಿಶೀಟ್ ಓಪನ್ ಮಾಡಿದ್ದಾರೆ ಅಂತ ಬಿಚ್ಚಿ ಹೇಳಬೇಕಾ ಎಂದು ತಿರುಗೇಟು ನೀಡಿದರು.
ಸುಹಾಸ್ ಶೆಟ್ಟಿ ಹತ್ಯೆ ನಂತರ ಸರ್ಕಾರ ಏನು ಕ್ರಮ ತಗೊಂಡಿದೆ. ಎಸ್ಡಿಪಿಐ ಮೇಲಿನ ಕೇಸ್ಗಳನ್ನು ವಾಪಸ್ ಪಡೆಯುವಾಗ ದಿನೇಶ್ ಗುಂಡೂರಾವ್ಗೆ ಅವಮಾನ ಆಗಲಿಲ್ಲ? ಸುಹಾಸ್ ಶೆಟ್ಟಿ ರೌಡಿಶೀಟರ್ ಅನ್ನೋದು ಅವಮಾನನಾ ನಿಮಗೆ? ಯಾರ್ಯಾರು ರೌಡಿಶೀಟರ್ಗಳನ್ನಿಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಹೇಳಬೇಕಾ ಎಂದು ವಾಗ್ದಾಳಿ ನಡೆಸಿದರು.