ಹಾಸನ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಮುಂದುವರೆದಿದೆ. ಜನಾಕ್ರೋಶ ಯಾತ್ರೆಗೆ ಎಲ್ಲಾ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಗುತ್ತಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ಹೊಂದಿದ್ದಾರೆ. ತಾಳ್ಮೆಯ ಕಟ್ಟೆ ಒಡೆಯುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಬೆಲೆ ಏರಿಕೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ರಾಯರೆಡ್ಡಿ ಅವರೇ ಹೇಳಿದ್ದಾರೆ ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್ ಅಂಥ. ಈ ಸರ್ಟಿಫಿಕೇಟ್ ನಾನ್ ಕೊಡುತ್ತಾ ಇಲ್ಲಾ. ಸಿಎಂ ಅವರ ಅರ್ಥಿಕ ಸಲಹೆಗಾರರೇ ಮಾಹಿತಿ ನೀಡಿದ್ದಾರೆ
ಭ್ರಷ್ಟಾಚಾರದಲ್ಲಿ ನಂಬರ್ ಒನ್, ರಾಯರೆಡ್ಡಿ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ಏನ್ ಹೇಳಿದ್ರು ಗೊತ್ತಾ..?
ಕೇಂದ್ರ ಸರ್ಕಾರ ಪೆಟ್ರೋಲ್ ಡೀಸಲ್ ಬೆಲೆ ಏರಿಸಿದ್ದಾರೆ. ಇದಕ್ಕೆ ಕಾರಣ ಕಚ್ಚಾತೈಲ ಬೆಲೆ ಏರಿಕೆ. ಆದರೆ ಇದರ ಹೊರೆ ಜನರ ಮೇಲೆ ಹಾಕಿಲ್ಲ. ಗ್ಯಾಸ್ ಮೇಲೆ 50 ರೂ ಏರಿಕೆ ಮಾಡಿದ್ದಾರೆ. ಆದರೆ ಗ್ಯಾಸ್ ಬೆಲೆ ಕಡಿಮೆ ಮಾಡಿದ್ದರು ಈಗ ಸ್ವಲ್ಪ ಪ್ರಮಾಣದ ಬೆಲೆ ಏರಿಕೆ ಆಗಿದೆ ಅಷ್ಟೇ. ಕಾಂಗ್ರೆಸ್ ಅರ್ಧ ಸತ್ಯ ಹೇಳುತ್ತಿದ್ದಾರೆ. ವಾಸ್ತವ ಬೇರೆ ಇದೆ. ಅದನ್ನ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದರು
ನಾವು ಬಿಜೆಪಿ ಯಿಂದ ಹೋರಾಟ ನಡೆಸುತ್ತಿದ್ದೇವೆ. ಜೆಡಿಎಸ್ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸ್ಪಷ್ಟವಾಗಿ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಪಕ್ಷಕ್ಕೆ ಬಲ ತುಂಬುವುದು ನನ್ನ ಕರ್ತವ್ಯ ಅದನ್ನ ನಾನು ಮಾಡ್ತಾ ಇದ್ದೇನೆ ಎಂದರು.
ಇನ್ನೂ ಜಾತಿ ಜನಗಣತಿಯನ್ನ ಬೆದರು ಗೊಂಬೆ ತರ ಬಳಕೆ ಮಾಡ್ತಾ ಇದ್ದಾರೆ. ಸರ್ಕಾರದ ಬುಡ ಅಲ್ಲಾಡಿದಾಗ ಇದರ ನಾಟಕ ಮಾಡುತ್ತಾರೆ. ಸರ್ಕಾರಕ್ಕೆ ನಿಜ ಕಾಳಜಿ ಇಲ್ಲ. ಸರ್ಕಾರದ ಯೋಗ್ಯತೆಗೆ ಸಿದ್ದರಾಮಯ್ಯ ಅವರಿಗೆ ಪ್ರಾಮಾಣಿಕತೆ ಇದ್ದರೆ ಜಾತಿ ಗಣತಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.