ಬಾಗಲಕೋಟೆ :ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ವಿರಕ್ತಮಠದಲ್ಲಿ ರಬಕವಿ ದೈವ ಮಂಡಳಿ ವತಿಯಿಂದ ನಿಗದಿತ ಜಾಗದಲ್ಲೇ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಆಗ್ರಹಿಸಿದರು.
ಕನ್ನಡ ಕಿಡಿ ಹಚ್ಚಿಸಿದ ಕಮಲ್ ಹಾಸನ್ ರಾಜ್ಯಸಭೆ ಪ್ರವೇಶಿಸಲು ರೆಡಿ..!
ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಗ್ರಾಮದ ರೀಸರ ನಂಬರ 63/ಬಿ ಕ್ಷೇತ್ರ 22.02 ಪೈಕಿ ಎಂ/ಗು ಜಮೀನಿಗೆ ಮದಲಮಟ್ಟಿ ಗ್ರಾಮದ ಪುನರ್ವಸತಿ ಕೇಂದ್ರದ ನಿರ್ಮಾಣದ ಉದ್ದೇಶಕ್ಕಾಗಿ ತಯಾರಿಸಿರುವ ತಾತ್ಕಾಲಿಕ ವಿನ್ಯಾಸ ನಕ್ಷೆಯಲ್ಲಿ ಕಾಯ್ದಿರಿಸಿದ ನಾಗರಿಕರ ಸೌಲಭ್ಯಕ್ಕಾಗಿ ನಿಗದಿಪಡಿಸಿದ ನಿವೇಶನ ಸಂ 298 ಕ್ಷೇತ್ರ 14200.55 ಚದರ ಮೀ ತಾಲೂಕು ಆಡಳಿತ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಿದರೆ ಸೂಕ್ತವಾಗುತ್ತದೆ ಎಂದು ಹೇಳಿದರು.
ಬೇರೆ ಬೇರೆ ಕಡೆ ಜಾಗ ಹುಡುಕುತ್ತ ಬೇರೆ ಪ್ರದೇಶದ ಜನತೆಯ ಹಿತ ಕಾಯುವತ್ತ ವೃಥಾ ಕಾಲಹರಣ ಮಾಡದೇ ಈ ಪೂರ್ವ ಸರ್ಕಾರ ನಿಗದಿ ಮಾಡಿದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿ ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು. ರಬಕವಿ ನಗರದ ಸರ್ವೆ ನಂಬರ 63/ಬಿ ಕ್ಷೇತ್ರ 22.02 ಪೈಕಿ ಜಾಗ ಸೂಕ್ತವಾಗಿದ್ದು ಸುಮ್ಮನೆ ಕಾಲಹರಣಮಾಡಲಾರದೆ ಈ ಸರ್ವೇ ನಂಬರ್ ದಲ್ಲಿ ಪ್ರಜಾತಂತ್ರ ನಿರ್ಮಾಣ ಮಾಡಲು ಸೂಕ್ತವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ರಾಮಣ್ಣ ಹುಲಕುಂದ. ದರೇಪ್ಪಾ ಉಳ್ಳಾಗಡ್ಡಿ. ಸಂಜಯ ತೆಗ್ಗಿ. ಶಿವಾನಂದ ಬಾಗಲಕೋಟೆಮಠ. ಬಸವರಾಜ ತೆಗ್ಗಿ. ಮಹಾದೇವ ದೂಪದಾಳ. ಸಂಜಯ ತೇಲಿ. ಮಲ್ಲೇಶ್ ಕುಚನೂರ.ರಾಯಪ್ಪ ಹೇಗ್ಗನವರ. ಸದಾಶಿವ ನಾಯಕ.ಡಾ.ರವಿ ಜಮಖಂಡಿ. ಪ್ರಭು ಪೂಜಾರಿ. ಚಿದಾನಂದ ಸೋಲ್ಲಾಪುರ.ನೀಲಕಂಠ ಮುತ್ತೂರು.ವೇಂಕಟೇಶ ಮಮದ್ದಾಪುರ.ಚನ್ನಬಸು ಬಿಜಾಪುರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.