Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರಂಜಾನ್​ ವೇಳೆ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ: ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ!

    By AIN AuthorApril 1, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ; ರಂಜಾನ್ ಹಬ್ಬದ ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಅವಹೇಳನಕಾರಿ ಪೋಸ್ಟರ್ ಹಿಡಿದ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಹಾಗೂ ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡರು ಹಾಗೂ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

    ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರು ಸಾವು, ಮೂವರು ಗಂಭೀರ!

    ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತಿದ್ದು ಸಂಪೂರ್ಣವಾಗಿ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

    ಅದು ಶಾಂತಿಯುತವಾಗಿ ರಂಜಾನ್ ಆಚರಣೆ ವೇಳೆ ಎಸ್ ಡಿಪಿಐ ಕಾರ್ಯಕರ್ತರು ಪುಂಡತನ ಮೆರೆಯಲು ಮುಂದಾಗಿದ್ದು ಸಂಘ ಪರಿವಾರದ ವಿರುದ್ಧ ಹಗುರವಾಗಿ ಪ್ಲೈಕಾರ್ಡ್ ಪ್ರದರ್ಶನ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿಶ್ವ ಹಿಂದು ಪರಿಷತ್ ಪ್ರಮುಖರು ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನಾಕಾರರು ಹಿಂದೂ ಗಳ ಭಾವನೆ ಧಕ್ಕೆ ಉಂಟು ಮಾಡಿದ ಎಸ್‌ಡಿಪಿಐ ಸಂಘಟನೆಗೆ ಽಕ್ಕಾರ ಽಕ್ಕಾರ, ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು ಎಂಬ ಘೋಷಣೆಗಳ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಎಸ್ ಡಿಪಿಐ ಕಾರ್ಯಕರ್ತರು
    ಧರ್ಮ, ಜನಾಂಗ, ವೈರತ್ವ, ದ್ವೇಷ, ವೈಮನಸ್ಸು ಮೂಡಿಸುವ ವಂದತಿ ಸೃಷ್ಟಿಸಿ ಸಾರ್ವಜನಿಕರಲ್ಲಿ ಭಯ ಭೀತಿ ಉಂಟು ಮಾಡಲಾಗಿದ್ದು, ಅವರ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು. ಹಿಂದು ಪರ ಸಂಘಟನೆಗಳ ಮುಖಂಡ ಹಾಗೂ ಹಿರಿಯ ವಕೀಲ ಸಂಜು ಬಡಸ್ಕರ್ ಮಾತನಾಡಿ,ಎಸ್‌ಡಿಪಿಐ ಕಾರ್ಯಕರ್ತನ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತನನ್ನು ತಕ್ಷಣ ಬಂಧಿಸಬೇಕು. ಅಷ್ಟೇ ಅಲ್ಲದೇ ಎಸ್‌ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು.ಎಸ್‌ಡಿಪಿಐ ದೇಶದ್ರೋಹಿ ಸಂಘಟನೆ ಎಂಬುವುದು ಜಗತ್ತಿಗೆ ಗೊತ್ತಿದೆ. ಹು-ಧಾ ಪೊಲೀಸ್ ಆಯುಕ್ತರು ಬೆಳಿಗ್ಗೆಯಿಂದ ಏನು ಮಾಡುತ್ತಿದ್ದಾರೆ. ಪ್ರಚಾರಗಿಟ್ಟಿ ಕೊಳ್ಳುವುದು, ಹಾಡು ಹೇಳುವುದು ಪೊಲೀಸ್ ಆಯುಕ್ತರು ಬಿಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಒತ್ತು ನೀಡಬೇಕು. ಪೊಲೀಸ್ ಆಯುಕ್ತರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದು, ಅವರನ್ನು ತಕ್ಷಣ ವರ್ಗಾವಣೆ ಅಥವಾ ಅಮಾನತು ಮಾಡಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಆಗ್ರಹಿಸಿದರು.

    ಹಿಂದೂಗಳ ಭಾವನೆ ಧಕ್ಕೆ ಉಂಟುಮಾಡುವ ಬ್ಯಾನರ್ ಹಿಡಿದು ಅಲೆದಾಡಿದರೂ ಸಹ ಪೊಲೀಸರು ಏನು ಕ್ರಮ ಕೈಗೊಂಡಿಲ್ಲ. ಎಸ್‌ಡಿಪಿ ಸಂಘಟನೆ ಕಾರ್ಯಕರ್ತ ಓಪನ್ ಸವಾಲು ಹಾಕುತ್ತಿದ್ದಾನೆ. ಬೆಳಿಗ್ಗೆ ಘಟನೆ ನಡೆದಿದ್ದು, ಸುಮೊಟೊ ಪ್ರಕರಣ ದಾಖಲಿಸಿಕೊಂಡು ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಏನು ಕ್ರಮಕೈಗೊಂಡಿಲ್ಲ. ಆಯುಕ್ತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ನಂತರ ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಯಿತು.

    Demo
    Share. Facebook Twitter LinkedIn Email WhatsApp

    Related Posts

    ವಿಜಯಪುರ| ಅಂತರಾಜ್ಯ ಹೆದ್ದಾರಿಯಲ್ಲಿ‌ ಸರಣಿ ಅಪಘಾತ

    June 29, 2025

    ಇದು ಗೂಂಡಾವರ್ತನೆ ಅಲ್ಲದೇ ಮತ್ತೇನು? ಗಾಳಿಯಲ್ಲಿ ಗುಂಡು ಹಾರಿಸಿ ಬರ್ತಡೇ ಮಾಡಿಕೊಂಡ ಗ್ರಾ. ಪಂ. ಸದಸ್ಯ!

    June 29, 2025

    ಬುರ್ಖಾ ಧರಿಸಿ ಬರ್ತಾರೆ.. ಕ್ಷಣಾರ್ಧದಲ್ಲಿ ಕದ್ದು ಎಸ್ಕೇಪ್ ಆಗ್ತಾರೆ: ಕೊಪ್ಪಳದಲ್ಲಿ ಕಳ್ಳಿಯರ ಗ್ಯಾಂಗ್ ಆ್ಯಕ್ಟೀವ್!

    June 29, 2025

    ಬ್ರ್ಯಾಂಡ್ ಎಂದು ಜೀನ್ಸ್ ಖರೀದಿಸೋ ಜನರೇ ಈ ಸುದ್ದಿ ನಿಮಗಾಗಿ: ಎಲ್ಲವೂ Fake!

    June 29, 2025

    ಪ್ರವಾಸಿಗರ ಗಮನಕ್ಕೆ: ನಂದಿ ಬೆಟ್ಟ, ಸ್ಕಂದಗಿರಿಧಾಮಕ್ಕೆ 4 ದಿನ ನಿರ್ಬಂಧ!

    June 28, 2025

    ಸಿಎಂ ಬದಲಾವಣೆ ವಿಚಾರ: ಶಾಸಕ ಬೈರತಿ ಸುರೇಶ್ ಹೇಳಿದ್ದೇನು?

    June 28, 2025

    ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ!

    June 28, 2025

    2025-26 ನೇ ಸಾಲಿನ ನೂತನ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಾಗಲವಾಡಿ ಚಂದ್ರು!

    June 28, 2025

    ಚಿಕ್ಕಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ದೇಶಲ್ಲಿಯೇ ಪ್ರಥಮ ವರದಿ ಸಿದ್ದಪಡಿಸಿದ ಹುಬ್ಬಳ್ಳಿಯ ಕೆಎಂಸಿ ಆರ್ ಐ ವೈದರು!

    June 28, 2025

    ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೆಗೈದ ಹೆಂಡ್ತಿ!

    June 28, 2025

    ಕಾಂಗ್ರೆಸ್’ನಲ್ಲಿ ಸೆಪ್ಟೆಂಬರ್ ಕ್ರಾಂತಿ ವಿಚಾರ: ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು..?

    June 28, 2025

    BREAKING.. ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಂದು ಬಲಿ..! ಮನೆಯಲ್ಲೆ ಕುಸಿದು ಬಿದ್ದು ವ್ಯಕ್ತಿ ಸಾವು

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.