ಬೆಂಗಳೂರು: ಬೀದರ್, ಶಿವಮೊಗ್ಗದಲ್ಲಿ ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿ ಜನಿವಾರ ತೆಗೆಸಿರುವ ವಿವಾದ ಸದ್ಯ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ವ್ಯಾಪಕ ಟೀಕೆಗೆ ಗುರಿಯಾಗುವುದರೊಂದಿಗೆ ರಾಜಕೀಯ ನಾಯಕರ ಹಗ್ಗಜಗ್ಗಾಟಕ್ಕೂ ವೇದಿಕೆಯಾಗಿದೆ.
ಎಚ್ಚರ ಜನರೇ: ಜ್ವರ, ತಲೆನೋವು ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ!? ಇದು ಎಷ್ಟು ಡೇಂಜರ್ ಗೊತ್ತಾ?
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ತಪ್ಪು. ಈ ಸಂಪ್ರದಾಯ ಸರಿಯಲ್ಲ. ಜನಿವಾರ, ಲಿಂಗ ಎಲ್ಲ ಹಾಕಿರುತ್ತಾರೆ. ಇದನ್ನು ತೆಗೆಸುವುದು ತಪ್ಪು ಎಂದರು.
ಪರೀಕ್ಷೆಯ ವೇಳೆ ಎಲೋಟ್ರಾನಿಕ್ಸ್ ಉಪಕರಣ ಹಾಕಿರುತ್ತಾರೆ. ಅದಕ್ಕೆ ಪೊಲೀಸರು ತಪಾಸಣೆ ಮಾಡ್ತಾರೆ. ಆದ್ರೆ ಜನಿವಾರ, ಲಿಂಗ ತೆಗೆಸಿದ್ದು ತಪ್ಪು. ಮಾಂಗಲ್ಯ ಸರ ಕೂಡ ಮಹಿಳೆಯರು ಹಾಕಿರುತ್ತಾರೆ. ಇದನ್ನೆಲ್ಲ ತೆಗೆಸುವುದು ತಪ್ಪು ಎಂದ ಡಿಕೆಶಿ ತಿಳಿಸಿದರು.