ಬೆಂಗಳೂರು:- ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಮನೆ ಮಾಡಿದೆ. ಗಾಂಧಿನಗರದ 46 ವಯಸ್ಸಿನ ಒಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೋವಿಡ್ ಕಾಣಿಸಿಕೊಂಡಿದ್ದು, ಹೇಗೆ ಬಂತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದಾರೆ. ಸದ್ಯ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇದೀಗ ಕೊರೊನಾ ಟೆಸ್ಟಿಂಗ್ ಆರಂಭಿಸಲಾಗಿದ್ದು, ದಿನಗಳೆದಂತೆ ಪಾಸಿಟಿವ್ ದರ ಜಾಸ್ತಿಯಾಗುತ್ತಲಿದೆ. ಸೋಮವಾರ 191 ಜನರಿಗೆ ಟೆಸ್ಟ್ ಮಾಡಲಾಗಿದ್ದು, 37 ಜನರಿಗೆ ಪಾಸಿಟಿವ್ ಆಗಿದೆ. ಜೊತೆಗೆ 171 ಜನರಿಗೆ RT-PCR ಟೆಸ್ಟ್ ಮಾಡಲಾಗಿದೆ.