ಬೆಂಗಳೂರು: ಯಾವ ಇಲಾಖೆಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ. ರಕ್ತ ಹೀರುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಮಗಾರಿ ತೆಗೆದುಕೊಳ್ಳಲು ಲಂಚ ಕೊಡಬೇಕು.
ಯಾವ ಇಲಾಖೆಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ. ರಕ್ತ ಹೀರುತ್ತಿದ್ದಾರೆ, ಜಿಗಣೆಯಾದರೆ ರಕ್ತವನ್ನು ಹೀರಿ ಬಿಡುತ್ತದೆ. ಆದರೆ ಇವರು ಹೀರುತ್ತಲೇ ಇದ್ದಾರೆ ಎಂದು ಟೀಕಿಸಿದರು.
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!
ಕಾಂಗ್ರೆಸ್ಸಿನ ಹಲವಾರು ಶಾಸಕರು ನಮ್ಮ ಕ್ಷೇತ್ರದಲ್ಲಿ ಕಲ್ಲು ಇಡಲು ಆಗುತ್ತಿಲ್ಲ, ಚರಂಡಿ ಮಾಡಲು ಆಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಹುತೇಕ ಶಾಸಕರ ಒಳ ಸಂಕಟವಿದು.
ಕೆಲವರು ಬಾಯಿ ಬಿಟ್ಟು ಹೇಳುತ್ತಾರೆ; ಕೆಲವರು ಬಾಯಿಬಿಟ್ಟು ಹೇಳುವುದಿಲ್ಲ ಇದು ಒಳ ಸಂಕಟ. ಇಂತಹ ಬಹುತೇಕ ಶಾಸಕರು ಇದ್ದಾರೆ. ಆಡಳಿತ ಪಕ್ಷದ ಶಾಸಕರ ಈ ಪರಿಪಾಠ ಆದರೆ ಇನ್ನು ವಿಪಕ್ಷ ಶಾಸಕರ ಗತಿ ಏನು ಆಗಬೇಕೆಂದು ಯೋಚನೆ ಮಾಡಿ ಎಂದು ಹೇಳಿದರು.