Close Menu
Ain Live News
    Facebook X (Twitter) Instagram YouTube
    Friday, May 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ಪರಿಷತ್ ಶಾಸಕ TA ಶರವಣ ಆಕ್ರೋಶ..!

    By Author AINMay 16, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಆಪರೇಷನ್ ಸಿಂಧೂರ್  ಬಗ್ಗೆ ಕೋಲಾರ ಕಾಂಗ್ರೆಸ್​​ ಶಾಸಕ ಕೊತ್ತೂರು ಮಂಜುನಾಥ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇನ್ನೂ ಈ ವಿಚಾರವಾಗಿ ದೇಶದ ಸ್ವಾಭಿಮಾನ, ಘನತೆ ಮತ್ತು ಸಾರ್ವಭೌಮತೆಯ ಸಂಕೇತವಾದ ಆಪರೇಶನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಸ್ವಲ್ಪವೂ ಗೌರವ ಇಲ್ಲದೆ ನಾಲಿಗೆ ಹರಿಬಿಟ್ಟಿರುವ ಕೋಲಾರದ ಕಾಂಗ್ರೆಸ್  ಶಾಸಕ ಕೊತ್ತನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ತಕ್ಷಣ ಪಕ್ಷದಿಂದ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಹಿರಿಯ ಶಾಸಕ, ಜೆಡಿಎಸ್ ನಾಯಕ ಟಿ. ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!

    ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ ಉಗ್ರರ ರಾಕ್ಷಸೀ ಕೃತ್ಯಕ್ಕೆ ತಕ್ಕ ಎದಿರೇಟು ನೀಡಲು ಆಪರೇಶನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಅಂಥದ್ದರಲ್ಲಿ ಈ ಶಾಸಕರು ಸ್ವಲ್ಪ ವೂ ಮಾನವೀಯತೆಯೇ ಇಲ್ಲದೆ ಬೇಕಾಬಿಟ್ಟಿ ನಾಲಿಗೆ ಹರಿ ಬಿಟ್ಟಿದ್ದಾರೆ. ಈ ಕಾಂಗ್ರೆಸ್ ಶಾಸಕರಿಗೆ ಮಾನ ಮರ್ಯಾದೆ ಇದೆಯೇ ಎಂದು ಶರವಣ ಕೆಂಡ ಕಾರಿದ್ದಾರೆ.

    ಸೈನಿಕರನ್ನು ಹೊತ್ತ ನಾಲ್ಕು ವಿಮಾನ ಹೋಗಿ ಬಾಂಬ್ ಹಾಕಿ ಬಂದರೆ ತಕ್ಕ ಪಾಠ ಹೇಗಾಗುತ್ತೆ? ಎಂದು ಕೇಳಿರುವ ಮಂಜುನಾಥ್ ನಿಲುವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯೇ?ಎಂದು ಶರವಣ ಪ್ರಶ್ನಿಸಿದ್ದಾರೆ.ಉಗ್ರರ ಪೈಶಾಚಿಕ ಕೃತ್ಯದಿಂದ  ತಮ್ಮ ಪತಿ, ಅಪ್ಪ, ಇಲ್ಲವೇ ಸಹೋದರರನ್ನು ಕಳೆದುಕೊಂಡ ಕುಟುಂಬಗಳ ನೋವು ಈ. ಶಾಸಕರಿಗೆ ಗೊತ್ತಾ? ಅಮೂಲ್ಯ ಜೀವಗಳನ್ನು ಈ ಶಾಸಕ ತಂದುಕೊಡುತ್ತಾರ? ಕಾಂಗ್ರೆಸ್ ಪಕ್ಷ ಈ ಬಗ್ಗೆ ಏನು ಹೇಳುತ್ತೆ? ಎಂದು ಶರವಣ ಪ್ರಶ್ನಿಸಿದ್ದಾರೆ.

    ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಸರಣಿ ಕೊಲೆಗಳನ್ನು ನೋಡಿದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ತಾಕತ್ತು ಈ ಸರಕಾರಕ್ಕೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಇಲ್ಲೇ ಗುಪ್ತದಳ ವಿಫಲವಾಗಿದೆ. ಅಂಥ ಥದ್ದರಲ್ಲಿ ಈ ಕಾಂಗ್ರೆಸ್ ಶಾಸಕರು ಸೇನೆಯ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಎಂದು ಶರವಣ ಪ್ರಶ್ನೆ ಮಾಡಿದ್ದಾರೆ. ಸೈನಿಕರನ್ನು ಅಪಚಾರ ಮಾಡಿರುವ  ಸಿಂಧೂರ ಕಾರ್ಯಾಚರಣೆಯನ್ನು ಅಪಚಾರ ಮಾಡಿ ಗೇಲಿ ಮಾಡಿರುವ ಈ ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

     

    Post Views: 9

    Demo
    Share. Facebook Twitter LinkedIn Email WhatsApp

    Related Posts

    ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ

    May 16, 2025

    ಬೆಂಗಳೂರನ್ನು ಗ್ರೇಟರ್‌ ಅಲ್ಲ. ಕ್ವಾರ್ಟರ್‌ ಬೆಂಗಳೂರು ಮಾಡಿದ್ದಾರೆ: ಆರ್‌.ಅಶೋಕ್‌

    May 16, 2025

    ಅಮೆರಿಕ ಹೇಳಿದ ಹಾಗೆ ಕೇಳುವುದು, ತಿರಂಗಾ ಯಾತ್ರೆ ಮಾಡೋದಷ್ಟೇನಾ?: ಸಚಿವ ಪ್ರಿಯಾಂಕ್ ಖರ್ಗೆ

    May 16, 2025

    RCB vs KKR: ಮತ್ತೆ ಪಂದ್ಯ ರದ್ದಾ..? ಚಿನ್ನಸ್ವಾಮಿ ಮೈದಾನದಲ್ಲಿ ಈಜುತ್ತಿರುವ RCB ಆಟಗಾರ..! ವಿಡಿಯೋ ವೈರಲ್

    May 16, 2025

    ನಟಿ ರುಕ್ಮಿಣಿ ಬ್ಯಾಗ್ ಕದ್ದಿದ್ದ ಆರೋಪಿ ಅರೆಸ್ಟ್! 10 ಲಕ್ಷದ ಡೈಮಂಡ್ ರಿಂಗ್, 9 ಲಕ್ಷದ ವಾಚ್ ವಶಕ್ಕೆ

    May 16, 2025

    ನಿನ್ನ ದೇಹದಲ್ಲಿ 15 ಆತ್ಮಗಳಿವೆ: ಲೇಡಿ ಕಾನ್‌ಸ್ಟೇಬಲ್‌ʼಗೆ ವಂಚಿಸಿ ಹಣ ವಸೂಲಿ ಮಾಡಿದ ಡೋಂಗಿ ಬಾಬಾ ಅರೆಸ್ಟ್.!

    May 16, 2025

    ‌Bangalore: ರೈಲಿನಲ್ಲಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್..!

    May 16, 2025

    Gold Rate Today: ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು! ಇಂದು ಗೋಲ್ಡ್ ಬೆಲೆ ಎಷ್ಟಿದೆ ನೋಡಿ

    May 16, 2025

    Crime News: ಪತಿಯಿಂದಲೇ ಪತ್ನಿಯ ಭೀಕರ ಕೊಲೆ: ಹತ್ಯೆಗೆ ಕಾರಣ?

    May 16, 2025

    ಬೆಂಗಳೂರಿನಲ್ಲಿ ನಾಳೆ RCB ಮ್ಯಾಚ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ಬಿಗಿ ಭದ್ರತೆ!

    May 16, 2025

    Rain Alert: ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಭರ್ಜರಿ ಮಳೆ ಸಾಧ್ಯತೆ!

    May 16, 2025

    ಗುಡ್ ನ್ಯೂಸ್: ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಗೌರವ ಧನ ಹೆಚ್ಚಿಸಿದ ಸರ್ಕಾರ!

    May 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.