ಬೆಂಗಳೂರು:- ಯುಗಾದಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಯುಗಾದಿ ಅಂದ್ರೆ ಹೋಳಿಗೆಯ ಘಮ, ಘಮ ಮನೆ, ಮನೆಗಳಲ್ಲೂ ಪಸರಿಸುತ್ತದೆ. ಯುಗಾದಿ ಸಮೀಪಿಸುತ್ತಿದ್ದಂತೆ ಹೋಳಿಗೆ ಪ್ರಿಯರು ಖುಷಿ ಪಡುವ ಸಿಹಿ ಸುದ್ದಿ ಸಿಕ್ಕಿದೆ. ಯುಗಾದಿ ಹಬ್ಬಕ್ಕೂ ಮುನ್ನವೇ ರಾಜ್ಯದಲ್ಲಿ ತೊಗರಿಬೇಳೆ ದರ ಇಳಿಕೆಯಾಗಿದೆ.
ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಯುಗಾದಿ ಹಬ್ಬಕ್ಕೆ ಖುಷಿಯಿಂದ ಹೋಳಿಗೆ ಊಟ ಸವಿಯಬಹುದಾಗಿದ್ದು, ತೊಗರಿಬೇಳೆ ಬೆಲೆ ಗಣನೀಯವಾಗಿ ಕುಸಿದಿದೆ. ಅಷ್ಟೇ ಅಲ್ಲ ಬಟಾಣಿ, ಕಡಲೆಕಾಳು ಮತ್ತಿತರ ಧಾನ್ಯಗಳ ಬೆಲೆಯಲ್ಲೂ ಇಳಿಕೆಯಾಗಿದೆ.
ತೊಗರಿಬೇಳೆ ಬೆಲೆಯು ಅಕ್ಟೋಬರ್-ನವೆಂಬರ್ನಲ್ಲಿ ಕೆ.ಜಿ.ಗೆ 200 ರೂ. ದಾಟಿತ್ತು. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಈ ವರ್ಷ ತೊಗರಿ ಫಸಲು ಎಲ್ಲೆಡೆ ಸಮೃದ್ಧವಾಗಿ ಬಂದಿದೆ. ಹೀಗಾಗಿ, ಇಳುವರಿಯೂ ಜಾಸ್ತಿಯಾಗಿದೆ. ಕರ್ನಾಟಕ ಮಾತ್ರವಲ್ಲ, ಪ್ರಮುಖವಾಗಿ ತೊಗರಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಧ್ಯಪ್ರದೇಶಗಳಲ್ಲೂಈ ಬಾರಿ ಉತ್ತಮ ಬೆಳೆಯಾಗಿದೆ. ಹೀಗಾಗಿ ತೊಗರಿಬೇಳೆಯ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ.
ಕಡಲೆಬೇಳೆ ಬೆಲೆ ಕೂಡ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗಗನಕ್ಕೇರಿತ್ತು. ಇದೀಗ ಅದರ ಬೆಲೆಯೂ ಇಳಿಕೆಯಾಗಿದೆ. ಬಟಾಣಿ, ಕಡಲೆಕಾಳು ಸೇರಿದಂತೆ ಇತರೆ ಬೇಳೆ, ಕಾಳುಗಳ ದರವೂ ಕಡಿಮೆಯಾಗಿದೆ. ಡಿಸೆಂಬರ್ನಿಂದೀಚೆಗೆ ಶೇ.15ರಷ್ಟು ದರ ತಗ್ಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ತೊಗರಿಬೇಳೆಯ ಸಗಟು ದರವು ಕೆ.ಜಿ.ಗೆ 150 ರಿಂದ 175 ರೂ.ಗಳಿಗೆ ಏರಿಕೆಯಾಗಿತ್ತು. ಚಿಲ್ಲರೆ ಮಾರಾಟಗಾರರು 200 ರೂ.ವರೆಗೆ ಮಾರಾಟ ಮಾಡಿದ್ದರು. ಈಗ ಸಗಟು ದರವು 105-135 ರೂ.ಗೆ ಇಳಿಕೆಯಾಗಿದೆ. ಚಿಲ್ಲರೆ ಮಾರಾಟಗಾರರು ಗುಣಮಟ್ಟದ ಬೇಳೆಯನ್ನು 170 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಸ್ವಲ್ಪ ಸಾಧಾರಣ ಬೇಳೆ 130-150 ರೂ. ಇದೆ.
ಮೂರು ತಿಂಗಳ ಹಿಂದೆ ಚಿಲ್ಲರೆ ಮಾರಾಟಗಾರರು ಕೆಜಿಗೆ 200 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು. ಈಗ ಚಿಲ್ಲರೆ ಮಾರಾಟಗಾರರು ಸಾಧಾರಣ ಬೇಳೆಯನ್ನು 130-150 ರೂಪಾಯಿ ಮತ್ತು ಒಳ್ಳೆ ಗುಣಮಟ್ಟದ ಬೇಳೆಯನ್ನು 170 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ.
2024ರ ಅಕ್ಟೋಬರ್-ನವೆಂಬರ್ನಲ್ಲಿ ತೊಗರಿಬೇಳೆ ಕೆಜಿಗೆ 200 ರೂಪಾಯಿ ದಾಟಿತ್ತು. ಇದೀಗ ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ತೊಗರಿಬೇಳೆ ದರ ಇಳಿಕೆ ಆಗಿರುವುದು ಗೃಹಿಣಿಯರಿಗೆ ಸಂತಸ ತಂದಿದೆ.