ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಜ್ಞರ ಜೊತೆ ಸಭೆ ನಡೆಸಿದ್ದು, “ಕೋವಿಡ್ ಲಸಿಕೆಯಿಂದ ಹೃದಯಾಘಾತವಾಗುತ್ತಿಲ್ಲ” ಎಂಬ ಸ್ಪಷ್ಟನೆ ನೀಡಿದ್ದಾರೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಸಚಿವರ ಮುಖ್ಯ ಅಂಶಗಳು:
ಲಸಿಕೆ ಸುರಕ್ಷಿತ: ಲಸಿಕೆ ಹೃದಯಾಘಾತಕ್ಕೆ ಕಾರಣವಲ್ಲ. ಎಂಆರ್‌ಎನ್‌ಎ ಲಸಿಕೆ ಕುರಿತು ಕೆಲವು ಅನುಮಾನಗಳು ಇದ್ದರೂ, ಭಾರತದ ಜನರು ಆ ಲಸಿಕೆಯನ್ನು ಪಡೆದುಕೊಂಡಿಲ್ಲ.
ಕೊವಿಡ್ ಬಳಿಕದ ಪರಿಣಾಮ: ಕರೋನಾದಿಂದ ಗುಣಮುಖರಾದವರು ಕೆಲವೊಮ್ಮೆ ಹೃದಯ ಸಮಸ್ಯೆ ಎದುರಿಸುವ ಸಂಭವ ಇದೆ. ರೋಗ ಬಂದು ಒಂದೆ ವರ್ಷದ ಒಳಗೆ ರಕ್ತನಾಳಗಳಲ್ಲಿ ಬ್ಲಾಕ್ ಆಗುವ ಸಾಧ್ಯತೆ ಇದೆ. ಆದರೆ, ಮೂರು ವರ್ಷದ ನಂತರ ತೀವ್ರ ಪರಿಣಾಮವಿಲ್ಲ.
ಸರ್ಕಾರದ ಮುಂದಿನ ಕ್ರಮ:
ಹೃದಯಘಾತವನ್ನು ಸಡನ್ ಡೆತ್ ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡುತ್ತೇವೆ. ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಹೃದಯಾಘಾತದ ಬಗ್ಗೆ ಪ್ರತ್ಯೇಕ ಪಠ್ಯ ಅಳವಡಿಕೆ ಮಾಡಲಾಗುವುದು. ಶಿಕ್ಷಣ ಇಲಾಖೆ ಮುಂದಿನ ವರ್ಷದಿಂದ ಪಠ್ಯ ಅಳವಡಿಕೆ ಮಾಡುತ್ತೆ ಎಂದು ಹೇಳಿದರು.