ಶನಿವಾರ ನಡೆದ ಉದ್ಘಾಟನಾ IPL ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ ಭರ್ಜರಿ ಗೆಲುವು ಸಾಧಿಸಿದೆ.
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಕೆಕೆಆರ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಇವರಿಬ್ಬರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ಸುಲಭ ಗೆಲುವು ಸಾಧಿಸಿತು. ಆದರೆ ಇದಕ್ಕೂ ಮುನ್ನ ಕೆಕೆಆರ್ ಬ್ಯಾಟಿಂಗ್ಗೆ ಕಡಿವಾಣ ಹಾಕಿದ ಕೃನಾಲ್ ಪಾಂಡ್ಯಗೆ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಯಿತು.
ಪಂದ್ಯದ ಬಗ್ಗೆ ಮೊದಲು ಮಾತನಾಡಿದ ಅವರು ಪ್ರೇಕ್ಷಕರ ಮೇಲೆ ಅಲ್ಲ ಆಟದ ಮೇಲೆ ಗಮನ ಕೊಡುವುದು ಮುಖ್ಯವಾಗುತ್ತದೆ. ತುಂಬಾ ಹೆಚ್ಚು ಪ್ರೇಕ್ಷಕರ ಎದುರು ಆಡುವಾಗ ಆಟದ ಮೇಲೆ ಗಮನ ಕೊಡುವುದು ಮುಖ್ಯ, ನಾನು ಗಮನವನ್ನು ಆಟದ ಕಡೆ ನೀಡಬೇಕಾಗಿತ್ತು, ಉತ್ತಮವಾಗಿ ಬೌಲ್ ಮಾಡಬೇಕಿತ್ತು, ಅದನ್ನು ಮಾಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದರು. ಕ್ರಿಕೆಟ್ ಸಾಕಷ್ಟು ಬದಲಾವಣೆಯಾಗುತ್ತಿದೆ, ನಾವು ಆ ಬದಲಾವಣೆ ಜೊತೆಗೆ ಹೋಗಬೇಕು, ಬ್ಯಾಟರ್ಗಳು ನಿರಂತರವಾಗಿ ಸಿಕ್ಸ್ ಹೊಡೆಯುವ ಕೌಶಲ್ಯವನ್ನು ಹೊಂದಿದ್ದಾರೆ.
ನೀವು ನಿಮ್ಮ ಆಟವನ್ನು ಹೆಚ್ಚಿಸಬೇಕು, ನಾನು ವೇಗವಾಗಿ ಬೌಲಿಂಗ್ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ವೇಗದ ಬದಲಾವಣೆಯು ವೇಗಿದ ಬೌಲರ್ ಗಳಿಗೆ ಸಂಬಂಧಿಸಿದೆ ಆದರೆ ನಾನು ಅದನ್ನು ಪ್ರಯತ್ನಿಸಿದೆ.” ಎಂದರು.
ಆರ್ಸಿಬಿ ತಂಡಕ್ಕೆ ಅಭಿಮಾನಿಗಲಿಂದ ಸಿಗುತ್ತಿರುವ ಬೆಂಬಲ ನೋಡಿ ಕೃನಾಲ್ ಪಾಂಡ್ಯ ಖುಷಿಯಾಗಿದ್ದಾರೆ. ಎಲ್ಲೇ ಹೋದರೂ ಅಭಿಮಾನಿಗಳ ಬೆಂಬಲ ಕಡಿಮೆಯಾಗಿಲ್ಲ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ಗಾಗಿ ಆಡಿದ್ದಾರೆ, ಆದರೆ ಆರ್ ಸಿಬಿಗೆ ಇರುವಷ್ಟು ಕ್ರೇಜಿ ಅಭಿಮಾನಿಗಳು ಬೇರೆ ಎಲ್ಲೂ ಇಲ್ಲ ಎಂದು ಹೇಳಿದ್ದಾರೆ.