ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿದೆ. ದಶಕ ಕಳೆದರೂ ರಚಿತಾ ಇಂದಿಗೂ ಬಹುಬೇಡಿಕೆ ನಟಿ. ದರ್ಶನ್, ಸುದೀಪ್ ನಂತಹ ಟಾಪ್ ಹೀರೋ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ಬುಲ್ ಬುಲ್ ಬೊಂಬೆಗೆ 32 ವಯಸ್ಸು. ಹೀಗಾಗಿ ರಚ್ಚುಗೆ ಹೋದಲ್ಲಿ ಬಂದಿಲ್ಲ ಮದುವೆ ಬಗ್ಗೆ ಪ್ರಶ್ನೆಗಳು ತೂರಿ ಬರ್ತಾವೆ. ನಿಮ್ಮ ಮದುವೆ ಯಾವಾಗ? ಈ ವರ್ಷನಾ? ಕೈ ಹಿಡಿಯುವ ಹುಡ್ಗ ಹೇಗೆ ಇರಬೇಕು ಅಂತಾ ರಚಿತಾ ಮಾತ್ರ ಈ ಬಗ್ಗೆ ಸ್ವಲ್ಪವೂ ಗುಟ್ಟುಬಿಟ್ಟು ಕೊಟ್ಟಿಲ್ಲ. ಆದರೆ ರಚ್ಚು ಮದುವೆ ಬಗ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರೇಜಿಯೆಸ್ಟ್ ನ್ಯೂಸ್ ಕೊಟ್ಟಿದ್ದಾರೆ.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ರಚಿತಾ ರಾಮ್, ರವಿಚಂದ್ರನ್ ಜಡ್ಟ್ ಗಳಾಗಿ ಹೊಸಬರಿಗೆ ನಟನೆ ಬಗ್ಗೆ ಗೈಡ್ ಮಾಡುತ್ತಿದ್ದಾರೆ. ಈ ವೇದಿಕೆಗೆ ಮೊನ್ನೆಯಷ್ಟೇ ವಿದ್ಯಾಪತಿ ಚಿತ್ರತಂಡ ಎಂಟ್ರಿ ಕೊಟ್ಟಿತ್ತು. ಚಿತ್ರದ ನಿರ್ಮಾಪಕ ಧನಂಜಯ್ ಕೂಡ ತಮ್ಮ ಪ್ರಚಾರದ ಕಾರ್ಯಕ್ಕೆ ಜೀ ವೇದಿಕೆ ಏರಿದ್ದರು. ಈ ವೇಳೆ ಆ್ಯಂಕರ್ ನಿರಂಜನ್, ‘ಮದುವೆ ಮೊದಲ ಜೀವನ, ಮದುವೆ ಬಳಿಕದ ಜೀವನ ಹೇಗಿದೆ’ ಎಂದು ಧನಂಜಯ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಾಲಿ, ‘ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು’ ಎಂದರು ಧನಂಜಯ್. ‘ಇಲ್ಲೇನೋ ಸಮಸ್ಯೆ ಇದೆ’ ಎಂದು ನಿರಂಜನ್ ಹೇಳಿದ್ದರು.
‘ಬ್ಯಾಚುಲರ್ ಜೀವನ ಒಂದು ಚಾಪ್ಟರ್, ಮದುವೆ ಬಳಿಕದ ಜೀವನ ಒಂದು ಚಾಪ್ಟರ್. ಮಗು ಆದಮೇಲೆ ಒಂದು ಚಾಪ್ಟರ್’ ಎಂದು ರವಿಚಂದ್ರನ್ ಹೇಳಿದರು. ‘ರಚಿತಾ ರಾಮ್ ಅವರು ಇನ್ನೂ ಬ್ಯಾಚುಲರ್ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದು ಡಾಲಿ ಧನಂಜಯ್ ಫನ್ ಮಾಡಿದರು. ‘ಈ ವರ್ಷ ಅವರು ಮದುವೆ ಆಗುತ್ತಿದ್ದಾರೆ’ ಎಂದು ರವಿಚಂದ್ರನ್ ಹೇಳಿಬಿಟ್ಟರು. ಹಾಗಿದ್ರೆ ರಚಿತಾ ಈ ವರ್ಷವೇ ಮದುವೆಯಾಗುತ್ತಿದ್ದಾರಾ? ಆಗಿದ್ರೆ ಯಾರು ಕೈ ಹಿಡಿಯುವ ಹುಡ್ಗ ಎಂದು ಅಭಿಮಾನಿಗಳು ಯೋಚನೆ ಮಾಡೋದಿಕ್ಕೆ ಶುರು ಮಾಡಿದ್ದಾರೆ.
ಬುಲ್ ಬುಲ್ ಚಿತ್ರದ ಮೂಲಕ ರಚಿತಾ ರಾಮ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದರು. ಅಂಬರೀಶ್, `ದಿಲ್ ರಂಗೀಲಾ’, `ರನ್ನ’, `ರಥಾವರ’, `ಚಕ್ರವ್ಯೂಹ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರರಂಗಕ್ಕೂ ರಚ್ಚು ಎಂಟ್ರಿ ಕೊಟ್ಟಿದ್ದರು.