ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ರಾಮಾಯಣ ಸಿನಿಮಾದ ಶೂಟಿಂಗ್ ಹಿನ್ನೆಲೆಯಲ್ಲಿ ಟಾಕ್ಸಿಕ್ ಸಿನಿಮಾದಿಂದ ಸಣ್ಣದೊಂದು ಬ್ರೇಕ್ ತಗೊಂಡಿದ್ದಾರೆ ಯಶ್. ಇದೀಗ ಟಾಕ್ಸಿಕ್ ಕುರಿತು ಇಂಪಾರ್ಟೆಂಡ್ ಅಪ್ಡೇಟ್ ಒಂದು ಸಿಕ್ಕಿದೆ.
ಟಾಕ್ಸಿಕ್ ಸಿನಿಮಾವನ್ನು ಆರು ಭಾಷೆಗಳಲ್ಲಿ ಬಿಡುಗಡೆ ಮಾಡೋಕೆ ಚಿತ್ರತಂಡ ಸಿದ್ಧತೆ ನಡೆಸಿದೆ.. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದೆ ಭಾಷೆಯಲ್ಲಿ ಬಿಡುಗಡೆ ಆಗ್ತಿದ್ದು, ಇಂಗ್ಲೀಷ್ ಮೂಲಕ ವಿಶ್ವದಾದ್ಯಂತ ಪ್ರದರ್ಶನ ಮಾಡಲು ಟಾಕ್ಸಿಕ್ ಟೀಂ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಚಿತ್ರವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾಗೆ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಆಕ್ಷನ್ ದೃಶ್ಯಗಳನ್ನು ಡೈರೆಕ್ಷನ್ ಮಾಡಿದ್ದಾರೆ. ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.
ಕೆಜಿಎಫ್ 2 ಹಿಟ್ ಆದ್ಮೇಲೆ ಯಶ್ ಅವರು ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮ ಜರುಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಟಾಕ್ಸಿಕ್ ಸಿನಿಮಾ ಮಾರ್ಚ್ 19 2026ರಂದು ಬಿಡುಗಡೆಯಾಗಲಿದೆ.