ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಮೊನ್ನೆ ಪತ್ನಿ ಅನುಷ್ಕಾ ಶರ್ಮಾ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ತೆರಳಿ ದರ್ಶನ ಪಡೆದರು. ಇದೇ 17ರಂದು ಆರ್‌ಸಿಬಿ ವರ್ಸಸ್ ಕೆಆರ್‌ಆರ್ ಪಂದ್ಯಾವಳಿ ಇದೆ. ಸದ್ಯ ಪಂದ್ಯ ಆರಂಭಕ್ಕೂ ಮುನ್ನ ಕಿಂಗ್ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ವಿರಾಟ್ ಇತ್ತೀಚೆಗೆ ಕುಟುಂಬ ಸಮೇತರಾಗಿ ಅನುಷ್ಕಾ ತಾಯಿ ಅಂದರೆ ಅತ್ತೆ ಮನೆಗೆ ಭೇಟಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ಹುಟ್ಟೂರಾದ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿದ್ದಾರೆ. ಈ ವೇಳೆ ಅನುಷ್ಕಾ ಅವರು ಮಗ ಅಕಾಯ್ ಎತ್ತಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ತಾಯಿ ಅಕಾಯ್‌ನ್ನು ಎತ್ತಿಕೊಳ್ಳುತ್ತಾರೆ. ಕೊಹ್ಲಿ ಮಗಳು ವಮಿಕಾ ಅಲ್ಲೇ ಆಟವಾಡುತ್ತಿದ್ದು, ಕೊಹ್ಲಿ ಲಾಗೇಜ್‌ಗಳನ್ನು ಕೆಳಗೆ ಇಳಿಸುವುದರಲ್ಲಿ ಬ್ಯುಸಿಯಾಗಿರುವ ವಿಡಿಯೋ ವೈರಲ್ ಆಗಿದೆ.
ವಾಮಿಕ, ಅಕಾಯ್ ಮುಖವನ್ನು ಕೊಹ್ಲಿ ದಂಪತಿ ಇಲ್ಲಿವರೆಗೂ ರಿವೀಲ್ ಮಾಡಿಲ್ಲ. ತಮ್ಮ ಮಕ್ಕಳ ವಿಚಾರದಲ್ಲಿ ಈ ಸೆಲೆಬ್ರಿಟಿ ಜೋಡಿ ತುಂಬನೇ ಖಾಸಗಿತನ ಕಾಪಾಡಿಕೊಂಡಿದ್ದಾರೆ. ಮಕ್ಕಳ ಜೊತೆಯಲ್ಲಿ ವಿರಾಟ್ ಅನುಷ್ಕಾ ದಂಪತಿ ಲಂಡನ್‌ನಲ್ಲಿ ನೆಲೆಸಲಿದ್ದಾರೆ ಎಂಬ ಸುದ್ದಿ ಇದೆ.
View this post on Instagram