ಹುಬ್ಬಳ್ಳಿ:- ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಹಳೇ ಹುಬ್ಬಳ್ಳಿ ಸರ್ಕಲ್ ಬಳಿಯ ಪವಾರ್ ಹೌಸ್ ಜಿಮ್ ಬಳಿ ಜರುಗಿದೆ.
ಹೇಮಾವತಿ ನೀರಿಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ: ಶಾಸಕ ಡಾ.ರಂಗನಾಥ್
ಚಾಕು ಇರಿತಕ್ಕೊಳಗಾದ ಯುವಕನನ್ನು ಶ್ರಫ್ ಆದೋನಿ ಎಂದು ಗುರುತಿಸಲಾಗಿದೆ.
ಅಪರಿಚಿತ ಗುಂಪೊಂದರಿಂದ ಕೃತ್ಯ ನಡೆದಿದೆ. ಹುಬ್ಬಳ್ಳಿಯ ಪತೇಶಾವಲಿ ದರ್ಗಾ ಸಂದಲ್ ಹಿನ್ನೆಲೆ ಡಿಜೆ ಹಚ್ಚಲಾಗಿತ್ತು. ಈ ವೇಳೆ ಡಿಜೆ ಸದ್ದಿಗೆ ಅಶ್ರಫ್ ಆದೋನಿ ಡಾನ್ಸ್ ಮಾಡ್ತಿದ್ದ. ಏಕಾಏಕಿ ಬಂದ ಗುಂಪು ಅಶ್ರಫ್ ಎದೆಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ.
ಕೂಡಲೇ ಗಾಯಾಳು ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಅಶ್ರಫ್ ರವಾನೆ ಮಾಡಲಾಗಿದೆ. ಅಶ್ರಫ್ ಆದೋನಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಸಬಾ ಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.