ಬೆಂಗಳೂರು:- ಸ್ಟ್ರಿಕ್ಟ್ ಮಾಡ್ತಿದ್ದರು ಅಂತಾ ತನ್ನ ತಂದೆಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗ ತಡರಾತ್ರಿ ನಡೆದಿದೆ.
ಎಚ್ಚರ ಜನರೇ: ಜ್ವರ, ತಲೆನೋವು ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ!? ಇದು ಎಷ್ಟು ಡೇಂಜರ್ ಗೊತ್ತಾ?
ಮಗ ಬೋಲು ಅರಬ್ನಿಂದ ನಿವೃತ್ತ ಯೋಧ 47 ವರ್ಷದ ಇಸ್ಲಾಂ ಅರಬ್ ರನ್ನ ಕೊಲೆ ಮಾಡಲಾಗಿದೆ. ಸದ್ಯ ವಿವೇಕನಗರ ಪೊಲೀಸರಿಂದ ಆರೋಪಿ ಬೋಲು ಅರಬ್ನನ್ನು ಬಂಧಿಸಲಾಗಿದೆ.
ಬೋಲು ಅರಬ್, ಬಿಕಾಂ ಮೊದಲನೇ ವರ್ಷದಲ್ಲಿ ಓದುತ್ತಿದ್ದಾನೆ. ತಂದೆ ಇಸ್ಲಾಂ ಅರಬ್ ಮನೆಯಲ್ಲಿ ಕಟ್ಟುನಿಟ್ಟಾಗಿದ್ದರು. ಮಗನಿಗೆ ಹೆಚ್ಚಾಗಿ ಹಣ ಖರ್ಚು ಮಾಡಲು ಬಿಡುತ್ತಿರಲಿಲ್ಲ. ಕಾಲೇಜಿನಿಂದ ತಡವಾಗಿ ಬಂದರೆ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ತಂದೆ ಮೇಲೆ ಪುತ್ರ ಬೇಸರಗೊಂಡಿದ್ದ. ಆದರೆ ತಂದೆ ಮಗನನ್ನ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆತನನ್ನು ದೊಡ್ಡ ಆರ್ಮಿ ಅಧಿಕಾರಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು.
ಮೊದಲಿಗೆ ಯಾರೋ ಐದಾರು ಜನ ಬಂದು ಹೊಡೆದು ಹೋದರು ಎಂದಿದ್ದ ಪುತ್ರ, ಅನುಮಾನಗೊಂಡ ಪೊಲೀಸರು ಮನೆ ಬಳಿಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಯಾರು ಮನೆಗೆ ಬಂದಿರುವ ದೃಶ್ಯ ಇರಲಿಲ್ಲ. ಇದನ್ನ ಮುಂದಿಟ್ಟು ಪ್ರಶ್ನಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಪುತ್ರ ಬೋಲು ಒಪ್ಪಿಕೊಂಡಿದ್ದಾನೆ.