ಬೆಂಗಳೂರು :- ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ಕ್ರೈಂ ರೇಟ್ ಹೆಚ್ಚಳವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದ ನವ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ. ನವ ಟಿಪ್ಪು ಸುಲ್ತಾನ್ ದರ್ಬಾರ್ ರಾಜ್ಯದಲ್ಲಿ ನಡೀತಿದೆ. ನಿಮಗೆ 135 ಸೀಟ್ ಕೇವಲ ಮುಸ್ಲಿಮರಿಂದ ಬಂದಿಲ್ಲ, ಹಿಂದೂಗಳು ಸಹ ವೋಟ್ ಹಾಕಿದ್ದಾರೆ. ಹಿಂದೂಗಳ ರಕ್ಷಣೆ ಯಾರು ಮಾಡ್ತಾರೆ? ಉತ್ತರದಲ್ಲಿ ಒಬ್ಬ ಪಪ್ಪು, ದಕ್ಷಿಣದಲ್ಲಿ ಒಬ್ಬ ಟಿಪ್ಪು ಇದ್ದಾರೆ. ಅಲ್ಲಿ ಪಾಕಿಸ್ತಾನ ಪರ ಮಾತನಾಡ್ತಾರೆ. ಇಲ್ಲಿ ಒಂದು ವರ್ಗದ ಪರ ಮಾತನಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು
ಬಿಹಾರದಲ್ಲೇ ಅಪರಾಧ ಸಂಖ್ಯೆಗಳು ಕಮ್ಮಿಯಾಗ್ತಿವೆ. ಆದ್ರೆ ನಮ್ಮ ರಾಜ್ಯದಲ್ಲಿ ಹೆಚ್ಚಾಗ್ತಿವೆ. ಪಿಎಫ್ಐ, ಕೆಎಫ್ಡಿಗಳಂಥ ಸಂಘಟನೆ ಕಾರ್ಯಕರ್ತರ ಕೇಸ್ಗಳ ವಾಪಸ್, ಮುಸ್ಲಿಂ ಓಲೈಕೆಗಳೇ ಇದಕ್ಕೆ ಕಾರಣ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ಕ್ರೈಂ ರೇಟ್ ಹೆಚ್ಚಾಗುತ್ತದೆ. ಉಗ್ರರನ್ನು, ಠಾಣೆಗೆ ಬೆಂಕಿ ಹಾಕಿದವರನ್ನು ಫ್ರೀಯಾಗಿ ರಸ್ತೇಲಿ ಓಡಾಡಲು ಸಿಎಂ ಅವಕಾಶ ಕೊಟ್ಟರು. ಇದರ ಪರಿಣಾಮ ಕಳೆದ ಸಲ ನಾವು 23 ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡೆವು. ರುದ್ರೇಶ್ ಹಾಗೂ ಪ್ರವೀಣ್ ನೆಟ್ಟಾರು ಕೇಸ್ಗಳ ತನಿಖೆಯನ್ನ ಎನ್ಐಎ ಮಾಡ್ತಿದೆ. ಇದರಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ಕೃತ್ಯ ಮಾಡಿದವರು ಸಿಕ್ಕಿ ಹಾಕಿಕೊಂಡರು. ಉಗ್ರರಿಗೆ ಕುಮ್ಮಕ್ಕು ಕೊಡ್ತಿದ್ದವರು ಸಿಕ್ಕಿ ಹಾಕಿಕೊಂಡಿದ್ದು, ಅವ್ರು ಇವತ್ತು ಜೈಲಿನಲ್ಲಿದ್ದಾರೆ ಎಂದರು