ಬೆಂಗಳೂರು: ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಷ್ ಶೆಟ್ಟಿ ಒಬ್ಬ ರೌಡಿಶೀಟರ್ . ರೌಡಿಶೀಟರ್ ಬಿಜೆಪಿಗರು ವಿಜೃಂಭಿಸಿ ರಾಜಕೀಯ ಮಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಎಲ್ಲವನ್ನೂ ತೆಗೆದುಕೊಂಡು ಹಿಂದುತ್ವದ ಜಾತಿಗೆ ಹಚ್ಚುವ ಕೆಲಸ ಆಗಬಾರದು. ಕೆಲವು ಸಾರಿ ಕ್ರಿಮಿನಲ್, ರೌಡಿಶೀಟರ್ ಗಳು ಇರುತ್ತಾರೆ. ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಬೇಕಾದಷ್ಟು ಮರ್ಡರ್ ಗಳಾಗುತ್ತವೆ. ಅವೆಲ್ಲವನ್ನೂ ಒಂದು ಪಕ್ಷಕ್ಕೆ ಸೇರಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಸುಹಾಸ್ ಶೆಟ್ಟಿ ಮೇಲೆ ಕೇಸ್ ಗಳಿತ್ತು. ಅವರು ಬಡಿದಾಡಿಕೊಂಡರೆ ಮುಸಲ್ಮಾನರೇ ಇರಬಹುದು, ಹಿಂದೂಗಳೇ ಇರಬಹುದು. ಮೊನ್ನೆ ಬಿಜಾಪುರದಲ್ಲಿ ಶೂಟ್ ಔಟ್ ಆಗಲಿಲ್ವಾ? ಅದನ್ನು ಒಯ್ದು ಹಿಂದೂ-ಮುಸ್ಲಿಂ ಅಂತ ಬಣ್ಣ ಹಚ್ಚೋದು ಸರಿಯಲ್ಲ. Criminals are Criminals. ಕ್ರಿಮಿನಲ್ ಗಳಿಗೆ ಯಾವುದೇ ಜಾತಿ ಇರಲಿ, ಯಾವುದೇ ಧರ್ಮ ಇರಲಿ. ಯಾವುದೇ ಪಕ್ಷಕ್ಕೆ ಅಂಟಿಕೊಂಡಿರಲಿ. ಅವರು ಕ್ರಿಮಿನಲ್ಸ್, ಕ್ರಿಮಿನಲ್ ಅನ್ನೋದೇ ಒಂದು ಜಾತಿ ಅದು ಹಿಂದೂನೂ ಅಲ್ಲ, ಮುಸ್ಲೀಮೂ ಅಲ್ಲ, ಬೌದ್ದರೂ ಅಲ್ಲ ಸಿಖ್ಖರೂ ಅಲ್ಲ. ಕ್ರಿಮಿನಲ್ ಎನ್ನೋದೇ ಒಂದು ಬೇರೆ ಜಾತಿ ಅದು ಎಂದು ಎಂಬಿ ಪಾಟೀಲ್ ವಿಶ್ಲೇಷಿಸಿದ್ದಾರೆ.
Droupadi Murmu: ಶಬರಿಮಲೆಗೆ ಭೇಟಿ ನೀಡುತ್ತಿರುವ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು!
ಸುಹಾಸ್ ಶೆಟ್ಟಿ ಬಗ್ಗೆ ಮಂಗಳೂರು ಭಾಗದ ಜನರಿಗೆ ಗೊತ್ತಿಲ್ವಾ? ಗೊತ್ತಿದೆ. ಆತ ರೌಡಿಶೀಟರ್, ಕ್ರಿಮಿನಲ್ ಹಿನ್ನೆಲೆ ಇದೆ ಎಂಬುದು ಮಂಗಳೂರು ಭಾಗದ ಜನರಿಗೆ ಗೊತ್ತಿದೆ. ಆದರೆ ಅದನ್ನು ಬಿಟ್ಟು ಬಿಜೆಪಿಯವರು ರಾಜಕೀಯ ಮಾಡುವುದು ಬಹಳ ಅಸಹ್ಯ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.