ಭಾರತೀಯ ಕುಟುಂಬಗಳಲ್ಲಿ ಕರಿಬೇವಿನ ಎಲೆಗಳಿಲ್ಲದೆ ಅಡುಗೆಯಾಗುವುದಿಲ್ಲ. ದೈನಂದಿನ ಊಟಕ್ಕೆ ಈ ಸುವಾಸನೆ ಭರಿತ ಎಲೆಗಳ ಒಗ್ಗರಣೆ ಸೇರಿಸಲು ಎಂದಿಗೂ ಮರೆಯುವುದಿಲ್ಲ. ಆದರೆ ಇದನ್ನು ಊಟಕ್ಕೆ ಕುಳಿತಾಗ ಮಾತ್ರ, ತಿನ್ನುವುದರ ಬದಲು ಪಕ್ಕಕ್ಕೆ ಎತ್ತಿ ಇಡುತ್ತೇವೆ. ಈ ಎಲೆಗಳಲ್ಲಿರುವ ಅದ್ಭುತ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಅದನ್ನು ಖಂಡಿತವಾಗಿಯೂ ಬಿಸಾಡುವುದಿಲ್ಲ. ಆಯುರ್ವೇದದಲ್ಲಿಯೂ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೋಷಕಾಂಶಗಳ ಶಕ್ತಿ ಕೇಂದ್ರವಾಗಿರುವುದರಿಂದ ಕರಿಬೇವಿನ ಎಲೆಗಳನ್ನು ವಿವಿಧ ಆರೋಗ್ಯ ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ.
ಮುಂದಿನ ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ: ಶಾಸಕ ರಾಘವೇಂದ್ರ ಹಿಟ್ನಾಳ
ಕರಿಬೇವಿನ ಎಲೆಗಳ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ:
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಕರಿಬೇವಿನ ಎಲೆಗಳು ಅಜೀರ್ಣ, ಮಲಬದ್ಧತೆ ಮತ್ತು ಗ್ಯಾಸ್ ನಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ: ಕರಿಬೇವಿನ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಉರಿಯೂತದ ಗುಣಲಕ್ಷಣಗಳು, ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಕರಿಬೇವು ಕೂದಲು ಉದುರುವಿಕೆಯನ್ನು ನಿವಾರಿಸುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ವಿಟಮಿನ್ ಎ ಮತ್ತು ಸಿ ಕೂದಲನ್ನು ಆರೋಗ್ಯವಾಗಿಡುತ್ತದೆ. ಅಷ್ಟೇ ಅಲ್ಲ, ಕರಿಬೇವಿನ ಎಲೆಗಳು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಧುಮೇಹಕ್ಕೆ ಕರಿಬೇವು: ಈ ಎಲೆಗಳಲ್ಲಿರುವ ನಾರಿನ ಅಂಶ ನಿಮ್ಮ ದೇಹದ ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸಿ ಕಾರ್ಬೋಹೈಡ್ರೇಟ್ ಅಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ದೇಹದ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗಿ ಕೊಲೆಸ್ಟ್ರಾಲ್ ಮಟ್ಟ ತಗ್ಗುತ್ತವೆ. ಜೊತೆಗೆ ಅವು ರಕ್ತಕ್ಕೆ ಬಿಡುಗಡೆಯಾಗುವ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.