Close Menu
Ain Live News
    Facebook X (Twitter) Instagram YouTube
    Thursday, June 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸೈಬರ್ ವಂಚಕರ ಹೊಸ ಪ್ಲ್ಯಾನ್: ವಾಟ್ಸಪ್‌ ಬಂದ ಲಿಂಕ್ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

    By AIN AuthorFebruary 7, 2025
    Share
    Facebook Twitter LinkedIn Pinterest Email
    Demo

    ವಾಷಿಂಗ್ಟನ್:- ಜಗತ್ತಿನಾದ್ಯಂತ ಹೆಚ್ಚಿನ ದೇಶಗಳು ಇಂದು ಸೈಬರ್ ಕ್ರೈಮ್ ಅಪರಾಧದಿಂದ ತತ್ತರಿಸಿ ಹೋಗಿವೆ. ಸೈಬರ್ ಅಪರಾಧದ ಒಂದು ಭಾಗ ಎಂದೆನಿಸಿರುವ ಸೈಬರ್ ಕ್ರೈಮ್ ಕಂಪ್ಯೂಟರ್ ಅಥವಾ ಇಂಟರ್ನೆಟ್ ಮೂಲಕ ನಡೆಸುವ ಕಳ್ಳತನವಾಗಿದೆ. ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಕದಿಯುವುದು, ಬ್ಯಾಂಕ್ ಖಾತೆಗೆ ಅಕ್ರಮವಾಗಿ ಪ್ರವೇಶಿಸಿ ಹಣ ಲಪಟಾಯಿಸುವುದು, ಪಾಸ್‌ವರ್ಡ್ ಮೊದಲಾದ ಅಧಿಕೃತ ಮಾಹಿತಿಯನ್ನು ಲೂಟುವುದು ಭದ್ರತಾ ಉಲ್ಲಂಘನೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಸೈಬರ್ ಕ್ರೈಮ್ ಒಳಗೊಂಡಿದೆ.

    ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕ ಬಲಿ

    ಸೈಬರ್ ವಂಚಕರು ನಾನಾ ರೀತಿಯಲ್ಲಿ ವಂಚಿಸಲು ಪ್ಲ್ಯಾನ್ ಹಾಕುತ್ತಾರೆ. ಇಲ್ಲಿಯವರೆಗೆ ವಾಟ್ಸಪ್‌ ಬಂದ ಲಿಂಕ್‌ ಓಪನ್‌ ಮಾಡಿದ್ದರೆ ಆಗ ಫೋನ್‌ಗಳು ಹ್ಯಾಕ್‌ ಆಗುತ್ತಿದ್ದವು. ಆದರೆ ಈಗ ಹ್ಯಾಕರ್‌ಗಳು ಇನ್ನು ಮುಂದೆ ಹೋಗಿದ್ದು ಲಿಂಕ್‌ ಓಪನ್‌ ಮಾಡದೇ ಹ್ಯಾಕ್‌ ಮಾಡಲು ಆರಂಭಿಸಿದ್ದಾರೆ.

    ಸುಮಾರು 12ಕ್ಕೂ ಹೆಚ್ಚು ದೇಶಗಳಲ್ಲಿ 90 ಜನರ ಮೊಬೈಲಿಗೆ ಸ್ಪೈವೇರ್ ಬಳಸಿ ಹ್ಯಾಕ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ ಕಂಪನಿಯಾದ ಪ್ಯಾರಾಗಾನ್ ಸೊಲ್ಯೂಷನ್ಸ್ ಒಡೆತನದ ಹ್ಯಾಕಿಂಗ್ ಟೂಲ್‌ ಬಳಸಿ ಹ್ಯಾಕ್‌ ಮಾಡಲಾಗಿದೆ.

    ಪ್ಯಾರಾಗಾನ್‌ನ ಸ್ಪೈವೇರ್ ಅನ್ನು ಸರ್ಕಾರಗಳಿಗೆ ಮಾರಾಟ ಮಾಡಲಾಗುತ್ತದೆ. ಅಪರಾಧಿಗಳ ವಿರುದ್ಧ ಮತ್ತು ರಾಷ್ಟ್ರೀಯ ಭದ್ರತೆ ಸಂಬಂಧ ಪಟ್ಟ ಪ್ರಕರಣಗಳು ಬಂದಾಗ ಸರ್ಕಾರ ಈ ಸ್ಪೈವೇರ್‌ ಬಳಸಿ ಮಾಹಿತಿಗಳನ್ನು ಕಲೆ ಹಾಕುತ್ತವೆ.

    ಈ ಸ್ಪೈವೇರ್‌ ಪೀಡಿತ ಬಳಕೆದಾರರ ಸಾಧನಗಳು ಅಪಾಯಕ್ಕೆ ಸಿಲುಕಿರಬಹುದು ಎಂದು ವಾಟ್ಸಾಪ್ ದೃಢಪಡಿಸಿದೆ. ಸುಮಾರು 90 ಬಳಕೆದಾರರನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಪತ್ತೆಹಚ್ಚಿರುವುದಾಗಿ ವಾಟ್ಸಾಪ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಿರ್ದಿಷ್ಟವಾಗಿ ಯಾರನ್ನು ಗುರಿಯಾಗಿಸಿ ಈ ಸ್ಪೈವೇರ್‌ ಬಿಡಲಾಗಿದೆ ಎಂದು ಹೇಳಲು ವಾಟ್ಸಪ್‌ ಅಧಿಕಾರಿಗಳು ನಿರಾಕರಿಸಿದ್ದಾರೆ. ಯುರೋಪಿನ ಹಲವಾರು ಜನ ಸೇರಿದಂತೆ 12 ಹೆಚ್ಚು ದೇಶಗಳ ಜನರನ್ನು ಗುರಿಯಾಗಿ ಈ ಸೈಬರ್‌ ದಾಳಿ ನಡೆದಿದೆ.

    Demo
    Share. Facebook Twitter LinkedIn Email WhatsApp

    Related Posts

    ಲಕ್ಷ-ಲಕ್ಷ ವಂಚನೆ ಕೇಸ್: ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಗೋಲ್ಡ್ ಸುರೇಶ್!

    June 18, 2025

    ಕಾರ್ಯಕ್ರಮಕ್ಕೆ ಹೋದ ಯುವಕ ಕೇರಳದ ಕೊಳದಲ್ಲಿ ಬಿದ್ದು ಸಾವು!

    June 18, 2025

    ಕೆಆರ್ ಪುರದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ!

    June 18, 2025

    ಇನ್ನು ಮುಂದೆ ಸಾರಿಗೆ ಇಲಾಖೆ ಮಾದರಿಯಲ್ಲಿ ಕುಡಿಯುವ ನೀರಿನ ದರ ಪರಿಷ್ಕರಣೆ; ಡಿ.ಕೆ. ಶಿವಕುಮಾರ್!

    June 18, 2025

    Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ!

    June 18, 2025

    IPS ಅಧಿಕಾರಿ ವಿರುದ್ದ ಭ್ರಷ್ಟಾಚಾರ ಆರೋಪ ಕೇಸ್: ಬಂಧನ ಭೀತಿಯಿಂದ ಕೋರ್ಟ್’ಗೆ ಅರ್ಜಿ ಮೇಲೆ ಅರ್ಜಿ

    June 18, 2025

    ಏಲಕ್ಕಿ -ಪಚ್ಚೆ ಬಾಳೆಹಣ್ಣು ಇವುಗಳ ನಡುವಿನ ವ್ಯತ್ಯಾಸ ಏನು? ಇದರಲ್ಲಿ ಆರೋಗ್ಯಕ್ಕೆ ಬೆಸ್ಟ್ ಯಾವುದು?

    June 18, 2025

    ನೀವು ಮನಸ್ಸು ಮಾಡಿದರೆ ಮೇಲಕ್ಕೂ ಏರಿಸಬಹುದು, ಕೆಳಕ್ಕೂ ಬೀಳಿಸಬಹುದು: ಡಿ.ಕೆ. ಶಿವಕುಮಾರ್

    June 18, 2025

    ಕೆಂಪೇಗೌಡ ಏರ್ಪೋಟ್’ನಿಂದ ಪ್ರಯಾಣಿಕರಿಗಾಗಿ ಮತ್ತೊಂದು ಸೇವೆ..! ಮಕ್ಕಳಿಗಾಗಿ ಹೊಸ ಟ್ರಾಲಿ ವ್ಯವಸ್ಥೆ

    June 18, 2025

    ಬಹುಕೋಟಿ ವಂಚನೆ ಕೇಸ್: ಐಶ್ವರ್ಯಾ ಗೌಡ ಕೇಸ್ ಸಿಐಡಿಗೆ ಶಿಫ್ಟ್..!

    June 18, 2025

    ಟೀನೇಜ್ ಲವ್.. ಮಕ್ಕಳು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್

    June 18, 2025

    ಖಾಲಿ ಇರುವ 35000 ಸಾವಿರ ನಿಮ್ಮ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು: ಸಿಎಂ ಸಿದ್ದರಾಮಯ್ಯ ಘೋಷಣೆ

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.