ಬೆಳಗಾವಿ:– ಸೈಬರ್ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪೊಲೀಸ್, ವಕೀಲ ಹಾಗೂ ಸರ್ಕಾರಿ ಅಧಿಕಾರಿಯ ಹೆಸರಿನಲ್ಲೂ ಅಮಾಯಕ ಜನರನ್ನು ಸೈಬರ್ ವಂಚಕರು ವಂಚನೆ ಮಾಡುತ್ತಿದ್ದಾರೆ. ಇದೀಗ ವಂಚಕರು ಬೆಳಗಾವಿ ಪೊಲೀಸ್ ಕಮೀಷನರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ತೆರೆದಿದ್ದಾರೆ. ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಆಗುವ ಮುನ್ನವೇ ಸೈಬರ್ ವಂಚಕರು ಕಿತಾಪತಿ ಮಾಡಿದ್ದಾರೆ. ಸೈಬರ್ ವಂಚಕರಿಂದ IPS ಆಫೀಸರ್ ಭೂಷಣ್ ಬೊರಸೆ ಹೆಸರಿನಲ್ಲಿ ಖಾತೆ ಸೃಷ್ಟಿ ಮಾಡಿದ್ದಾರೆ.
ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್
B Bhushan Gulabao Ips ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಓಪನ್ ಮಾಡಿದ್ದು, ನಕಲಿ ಖಾತೆ ಬಗ್ಗೆ ಬೆಳಗಾವಿ ನಗರದ ಜನರು ಎಚ್ಚರದಿಂದ ಇರಿ ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಎಚ್ಚರಿಕೆ ಕೊಟ್ಟಿದ್ದಾರೆ. ಘಟನೆ ಸಂಬಂಧ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಾನು ಕಮೀಷನರ್ ಆಫ್ ಪೊಲೀಸ್ ಬೆಳಗಾವಿ ಸಿಟಿ ಹೆಸರಿನ ಖಾತೆ ಮಾತ್ರ ನಿರ್ವಹಣೆ ಮಾಡ್ತಿರುವೆ. ನಾನು ನನ್ನ ವೈಯಕ್ತಿಕ ಹೆಸರಿನ ಖಾತೆ ಬಳಸುತ್ತಿಲ್ಲಾ ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಸ್ಪಷ್ಟನೆ ಕೊಟ್ಟಿದ್ದಾರೆ.