ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಫುಲ್ ಜೋಡಿಗಳಲ್ಲೊಂದು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ನಟರಾಕ್ಷಸ ಡಾಲಿ ಧನಂಜಯ್. ಟಗರು ಸಿನಿಮಾದಲ್ಲಿ ಶಿವಣ್ಣ-ಡಾಲಿ ಜುಗಲ್ಬಂಧಿ ಸಖತ್ ಕ್ಲಿಕ್ ಆಗಿತ್ತು. ಆ ಬಳಿಕ ಇಬರಿಬ್ಬರ ಕಾಂಬೋದಲ್ಲಿ ಉತ್ತರಕಾಂಡ ಚಿತ್ರ ಅನೌನ್ಸ್ ಆಗಿದೆ. ಧನಂಜಯ್ ಹೀರೋ ಆಗಿ ನಟಿಸುತ್ತಿರುವ ಉತ್ತರಕಾಂಡದಲ್ಲಿ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಟಗರು ಜೋಡಿ ಮತ್ತೊಮ್ಮೆ ಕೈ ಜೋಡಿಸಿದೆ.
ಕವಲುದಾರಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ಸಾರಥಿ ಹೇಮಂತ್ ರಾವ್ ಶಿವಣ್ಣನಿಗೆ ಹೊಸ ಚಿತ್ರ ಅನೌನ್ಸ್ ಮಾಡಿದ್ದರು. ಭೈರವನ ಕೊನೆಯ ಪಾಠ ಎಂಬ ಕ್ಯಾಚಿ ಟೈಟಲ್ ನಲ್ಲಿ ಚಿತ್ರ ಘೋಷಣೆಯಾಗಿತ್ತು. ಈ ಚಿತ್ರೀಕರಣ ಮುಂದೂಡಲಾಗಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ಗಳು ಮತ್ತು ಭಾರದ ಕಾಸ್ಟ್ಯೂಮ್ಗಳು ಇರುವುದರಿಂದ ಅದಕ್ಕೆ ಶಿವಣ್ಣ ಸಿದ್ಧರಾಗಲು ಸ್ವಲ್ಪ ಸಮಯ ಬೇಕಾಗಿರುವುದರಿಂದ ಈ ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.
ಭೈರವನ ಕೊನೆಯ ಪಾಠ ಚಿತ್ರ ಪಕ್ಕಕ್ಕಿಟ್ಟು ಹೇಮಂತ್ ಹೊಸ ಚಿತ್ರ ಮಾಡಲು ಮುಂದಾಗಿದ್ದು, ಈ ಚಿತ್ರ ಧನಂಜಯ್ ಹೀರೋ ನಟಿಸಲಿದ್ದಾರಂತೆ. ಆ ಪ್ರಾಜೆಕ್ಟ್ ನಲ್ಲಿ ಶಿವಣ್ಣ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಡಾಲಿ ಧನಂಜಯ್ ಸದ್ಯ ‘ಜಿಂಗೋ’, ‘ಅಣ್ಣ ಫ್ರಂ ಮೆಕ್ಸಿಕೋ’ , ʼಹಲಗಲಿʼ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಹೇಮಂತ್ ರಾವ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇಷ್ಟರಲ್ಲೇ ಸಿನಿಮಾ ಸೆಟ್ಟೇರುವ ಸೂಚನೆ ಇದೆ.