ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಇಂದು ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. ಸದ್ಯ ಕೋರ್ಟ್ ಜುಲೈ 10ಕ್ಕೆ ವಿಚಾರಣೆಯನ್ನು ಮುಂದೂಡಿದೆ. ನಟ ಧನ್ವೀರ್ ದರ್ಶನ್ ನನ್ನು ಕೋರ್ಟ್ ಕರೆದು ತಂದರು. ವಿಚಾರಣೆ ಶುರುವಾಗುತ್ತಿದ್ದಂತೆ ದರ್ಶನ್-ಪವಿತ್ರಾ ದೂರ ದೂರ ನಿಂತಿದ್ದರು. ಈ ವೇಳೆ ಜಡ್ಜ್ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿ ಪವಿತ್ರಾ ಗೌಡ ಬಳಿ ನಿಲ್ಲಲು ಹೇಳಿದರು. ಜಡ್ಜ್ ಸೂಚನೆಯ ನಂತರ ದರ್ಶನ್ ಪವಿತ್ರಾ ಗೌಡ ಬಳಿ ಬಂದು ನಿಂತುಕೊಂಡರು. ಕೋರ್ಟ್‌ನಲ್ಲಿ ಪರಸ್ಪರ ಮಾತನಾಡದ ಸುಬ್ಬ ಸುಬ್ಬಿ ಲಿಫ್ಟ್‌ನಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಹೊಸ ಫೋನ್ ನಂಬರ್ ಪಡೆಯಲು ಪವಿತ್ರಾ ಗೌಡ ಮುಂದಾದ್ರೂ ಎನ್ನಲಾಗುತ್ತಿದೆ.
ಹೊರರಾಜ್ಯಕ್ಕೆ ತೆರಳಲು ಕೋರ್ಟ್ ಪವಿತ್ರಾ ಗೌಡಗೆ 15 ದಿನ ಅವಕಾಶ ನೀಡಿದೆ. ಕಳೆದ ಬಾರಿ ಅನಾರೋಗ್ಯದ ನೆಪ ಹೇಳಿ ದರ್ಶನ್ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಆದರೆ ಈ ಬಾರಿ ದರ್ಶನ್ ಕೋರ್ಟ್‌ಗೆ ಹಾಜರಾಗಿದ್ದಾರೆ. ನಿನ್ನೆಯಷ್ಟೇ 22ನೇ ವಿವಾಹ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಕೋರ್ಟ್ ನಿಂದ ಹೊರಬಂದ ಮೇಲೆ ಪವಿತ್ರಾ ಗೌಡರಿಂದ ದಾಸ ಅಂತರ ಕಾಯ್ದುಗೊಂಡಿದ್ದಾರೆ ಎನ್ನಲಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಗ್ಯಾಂಗ್ ನ ಹಳೆ ಸದಸ್ಯರಿಗೆ ಕೋಟ್ ಕೊಟ್ಟಿದ್ದಾರಂತೆ.