ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರು ಚಿಕ್ಕಣ್ಣ ಅವರನ್ನು ಭೇಟಿಯಾಗಿರೋದು ಇದೀಗ ಚರ್ಚಗೆ ಗ್ರಾಸವಾಗಿದೆ. ಹೌದು, ನಟ ಚಿಕ್ಕಣ್ಣರನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣಲ್ಲಿ ಸಾಕ್ಷಿಯಾಗಿ ಪರಿಗಣಿಸಿದೆ. ಇದೀಗ ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಅವರು ಅದೇ ಪ್ರಕರಣದ ಸಾಕ್ಷಿಯಾಗಿರುವ ಚಿಕ್ಕಣ್ಣ ಅವರನ್ನು ಭೇಟಿಯಾಗಿರೋದು ಸಾಕ್ಷಿನಾಶದ ಪ್ರಯತ್ನವಾಗಬಹುದು ಎನ್ನಲಾಗುತ್ತಿದೆ.
ಬುಧವಾರ ತೀವ್ರ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಕೋರ್ಟ್ ವಿಚಾರಣೆ ಗೈರಾಗಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಕೋರ್ಟ್ ದರ್ಶನ್ ಪರ ವಕೀಲರಿಗೆ ಗೈರಾಗಿದ್ದರ ಕುರಿತು ಕ್ಲಾಸ್ ತೆಗೆದುಕೊಂಡಿತ್ತು. ಆದರೆ ಅದೇ ದಿನ ಸಂಜೆ ದರ್ಶನ ಬಂಟ ಧನ್ವೀರ್ ಅಭಿನಯದ ವಾಮನ ಚಿತ್ರ ವೀಕ್ಷಣೆ ಮಾಡಿದ್ದಾರೆ ದರ್ಶನ್.
ಜಾಮೀನು ಸಿಕ್ಕರೂ ನಟ ದರ್ಶನ್ ಗೆ ತಪ್ಪದ ಸಂಕಷ್ಟ: ರಾಜಾತಿಥ್ಯ ಪ್ರಕರಣದ ತನಿಖೆ ಚುರುಕು!
ನಿನ್ನೆ ಸಂಜೆ ನಡೆದ ವಾಮನ ಪ್ರೀಮಿಯರ್ ಶೋ ನಲ್ಲಿ ನಟ ದರ್ಶನ್ ಚಿತ್ರ ವೀಕ್ಷಣೆ ಮಾಡಿದ್ದರು. ಈ ವೇಳೆ ನಟ ಚಿಕ್ಕಣ್ಣ ಸಹ ಆಗಮಿಸಿದ್ದು, ಇಬ್ಬರು ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ. ಹೀಗಾಗಿ ಪ್ರಕರಣದ ಅರೋಪಿಯಾಗಿರುವ ದರ್ಶನ್, ಪ್ರಕರಣದ ಸಾಕ್ಷಿ ಎಂದೇ ಪರಿಗಣಿಸಲಾಗಿರುವ ಚಿಕ್ಕಣ್ಣರನ್ನು ಭೇಟಿಯಾಗಿ ಮಾತಾಡಿರೋದು ಇದೀಗ ಸಾಕ್ಷಿನಾಶದ ಆರೋಪ ಕೇಳಿ ಬಂದಿದೆ.
ʼರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ದರ್ಶನ್ (Darshan) ಮತ್ತು ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ಜಡ್ಜ್ ಎದುರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆ ನೀಡಿದ ನಂತರ ಚಿಕ್ಕಣ್ಣ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಅಂದು ಸಹ ತನಿಖಾ ಹಂತದಲ್ಲಿರುವಾಗಲೇ ಚಿಕ್ಕಣ್ಣ ದರ್ಶನ್ ಅವರನ್ನು ಭೇಟಿ ಮಾಡಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ಇದೀಗ ಮತ್ತೆ ಚಿಕ್ಕಣ್ಣ ಮತ್ತೆ ದರ್ಶನ್ ಭೇಟಿಯಾಗಿರುವುದು ವ್ಯಾಪಕ ಚರ್ಚೆಯಾಗುತ್ತಿದೆ.