ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರ ಬಂದಿದ್ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಹೊಸ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ ಅಭಿಮಾನಿಗಳೊಟ್ಟಿಗೆ ಕನೆಕ್ಟ್ ಆಗುತ್ತಾರೆ. ಅಲ್ಲದೇ ತಮ್ಮದೇ ರೆಡ್ ಕಾರ್ಪೆಟ್ ಡಿಸೈನರ್ ಸ್ಟುಡಿಯೋ ಕೆಲಸದಲ್ಲಿ ಬ್ಯುಸಿಯಾಗಿರುವ ಅವರೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.
ಎಲ್ಲವನ್ನೂ ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು, ನಿನ್ನವರು ಯಾರೆಂದು ತಿಳಿಯುತ್ತದೆ. ಮೌನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದ್ದಂತೆ. ನಗು ಎಲ್ಲಾ ಪರಿಸ್ಥಿತಿಗೂ ಬೆಸ್ಟ್ ರಿಯಾಕ್ಷನ್ ಎಂದು ಪೋಸ್ಟ್ ಮಾಡಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪವಿತ್ರಾ ಗೌಡ ಟಾಂಗ್ ಕೊಟ್ಟಿದ್ದು ಯಾರಿಗೆ ಎಂಬ ಚರ್ಚೆ ಶುರುವಾಗಿದೆ.
ವಿಜಯಲಕ್ಷ್ಮಿಗೆ ಪವಿತ್ರಾ ಡಿಚ್ಚಿ!
ಮೊದಲಿನಿಂದಲೂ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ನಡುವೆ ಶೀತಲ ಸಮರವಿದೆ. ದರ್ಶನ್ ವಿಚಾರವಾಗಿ ಇವರಿಬ್ಬರು ಪೋಸ್ಟ್ ಹಾಕುವ ಮೂಲಕ ಟಾಂಗ್ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇದೀಗ ಈ ಬೆಳವಣಿಗೆ ನಡುವೆ ಪವಿತ್ರಾ ಗೌಡ ವಿಜಯಲಕ್ಷ್ಮಿಗೆ ಟಾಂಗ್ ಕೊಟ್ಟಿರಬಹುದು ಎಂಬ ಚರ್ಚೆ ಇದೆ.