ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಳ್ಳಂ ಬೆಳಗ್ಗೆ ಕುಟುಂಬ ಸಮೇತರಾಗಿ ನಾಡದೇವತೆ ಚಾಮುಂಡಿತಾಯಿ ದರ್ಶನ ಪಡೆದಿದ್ದಾರೆ. ಪತ್ನಿ ವಿಜಯಲಕ್ಷ್ಮೀಯೊಟ್ಟಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರತಿ ಬಾರಿ ಆಷಾಡದ ಶುಕ್ರವಾರದಂದು ದರ್ಶನ್ ಚಾಮುಂಡಿತಾಯಿಗೆ ನಮಿಸುವ ಪದ್ಧತಿ ರೂಡಿಸಿಕೊಂಡು ಬಂದಿದ್ದಾರೆ. ಅದರಂತೆ ಇಂದು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ.
ದರ್ಶನ್ ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂದು ಘೋಷಣೆ ಕೂಗಿದ್ದಾರೆ. ಇನ್ನು, ದರ್ಶನ್ ಗೆ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಕೂಡ ಸಾಥ್ ಕೊಟ್ಟಿದ್ದಾರೆ. ಇಂದು ಚಾಮುಂಡೇಶ್ವರಿ ತಾಯಿಗೆ ಲಕ್ಷ್ಮೀ ಅಲಂಕಾರ, ಹೂವು, ಬಳೆ, ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು. ದರ್ಶನ್ ಆಗಮಿಸಿದ ವೇಳೆ ಸಾಕಷ್ಟು ಮಂದಿ ಅಭಿಮಾನಿಗಳು ಅವರನ್ನು ಕಾಣಲು ಬಂದ ಕಾರಣ, ದೇವಾಲಯದಲ್ಲಿ ನೂಕು-ನುಗ್ಗಲು ಉಂಟಾಯ್ತು.
ಆಷಾಡ ಶುಕ್ರವಾರವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡಿತಾಯಿ ದರ್ಶನ ಪಡೆಯುತ್ತಿದ್ದಾರೆ.